ಉಡುಪಿ : ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ 42 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಕಾರ್ಯಕ್ರಮ ವೇದ ಮೂರ್ತಿ ಪಾಡಿಗಾರ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯ ಕಾತ್ಯಾಯನಿ ಮಂಟಪದಲ್ಲಿ ಜರಗಿತು.
ಶ್ರೀದೇವಿಯ ಸನ್ನಿಧಿಯಲ್ಲಿ , ಸಾಮೂಹಿಕ ಪ್ರಾರ್ಥನೆ , ಕಳಸ ಪ್ರತಿಷ್ಠಾಪನೆ , ಸಮೂಹಿಕ ಕುಂಕುಮ ಅರ್ಚನೆ , ಮಂಡಲ ಪೂಜೆ , ಮಹಾಮಂಗಳಾರತಿ ,ದೋರ ಗ್ರಂಥಿ ಸಹಿತ ಪ್ರಸಾದ ವಿತರಣೆ ನೆಡೆಯಿತು , ಧಾರ್ಮಿಕ ಪೂಜಾ ವಿಧಾನಗಳನ್ನು ಶ್ರೀಶ ಭಟ್ ಎಲ್ಲೂರು , ಅರ್ಚಕ ವೃಂದದವರು ನೆಡೆಸಿಕೊಟ್ಟರು.

ಧಾರ್ಮಿಕ ಸಭಾ ಕಾರ್ಯದ ಮುಖ್ಯ ಅತಿಥಿಯಾಗಿ ನ್ಯಾಯವಾದಿ ಸುಪ್ರಸಾದ ಶೆಟ್ಟಿ , ಶೋಭಾ ಭಂಡಾರ್ಕರ್ , ಡಾ ಉಷಾ ಹೆಬ್ಬಾರ್ , ಮಾತೃ ಮಂಡಳಿಯ ಸ್ಥಾಪಕರಾದ ಸುಪ್ರಭಾ ಆಚಾರ್ಯ,ಅಧ್ಯಕ್ಷೆ ಪದ್ಮಾ ರತ್ನಾಕರ್ ,ಭಾರತಿ ಇಂದು ಶೇಖರ್ ಸ್ವಾಗತಿಸಿದರು , ಮಾತೃ ಮಂಡಳಿಯ ಸದಸ್ಯರು , 500 ರಕ್ಕೊ ಹೆಚ್ಚು ಸುಮಂಗಳೆಯರು ಉಪಸ್ಥರಿದ್ದರು.

