ಬಿಯಾನ್ಡ್ ಬೆಂಗಳೂರು ಮಿಷನ್ & ಸ್ಟಾರ್ಟ್ ಅಪ್ ವೇಗವರ್ಧಕ ಉಪಕ್ರಮ

0
4

ಕರ್ನಾಟಕ ಸರ್ಕಾರ ತನ್ನ ಬಿಯಾನ್ ಬೆಂಗಳೂರು ಮಿಷನ್ ಮತ್ತು ಎಲ್ ಇ ಎ ಪಿ ಉಪಕ್ರಮದ ಅಡಿಯಲ್ಲಿ ಕರ್ನಾಟಕದ ಉನ್ನತ ಸಾಮರ್ಥ್ಯದ ಸ್ಟಾರ್ಟಪ್ಗಳನ್ನು ಗುರುತಿಸಿ, ಪೋಷಿಸಿ, ವೇಗ ವರ್ತಿಸುವ ಗುರಿ ಉಳ್ಳ ಉದ್ಯಮ ನೇತೃತ್ವದ ರಚನಾತ್ಮಕ ಸ್ಟಾರ್ಟರ್ಪ ವೇಗವರ್ಧಕ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಅದಕ್ಕಾಗಿ ಮಂಗಳೂರಿನ ಟಿ ಐ ಇ ಸಂಸ್ಥೆಯನ್ನು ಆಯ್ಕೆ ಮಾಡಿದೆ.

ದಶಕದಷ್ಟು ಹಳೆಯ ಸಂಘಟಿತ ಮಾರ್ಗದರ್ಶನ ವಿಧಾನವಾದ ಟಿ ಐ ಲಕ್ಚರ್ ಅನ್ನು ಆಧರಿಸಿ ಕೋ ಹಾರ್ಟ್ ಗೆ 4-6 ಸ್ಟಾರ್ಟ್ ಅಪ್ ಗಳನ್ನು ಆಯ್ಕೆ ಮಾಡಲಿದೆ. ವರ್ಷಕ್ಕೆ 3 ಕೋ ಹಾರ್ಟ್ಗಳನ್ನು ಯೋಜಿಸಲಾಗಿದೆ. ಆಯ್ಕೆಯಾದ ಸಂಸ್ಥಾಪಕರು ಬೂಟಿಕ್ಯಾಂಪ್ಗಳು, ಮಾಸ್ಟರ್ ಕ್ಲಾಸ್ ಗಳು, 15 ಪ್ಲಸ್ ಮಾರ್ಗದರ್ಶನ ಅಧಿವೇಶನಗಳು, ಪೀರ್ ರಿವ್ಯೂಗಳು, ಮಾರುಕಟ್ಟೆ ಮತ್ತು ಉದ್ಯಮ ಸಂಪರ್ಕ, ಹೂಡಿಕೆ ಸಿದ್ಧತೆ ಹಾಗೂ ಡೆಮೊ ಡೇ ಅವಕಾಶಗಳನ್ನು ರಚನಾತ್ಮಕ 16 ವಾರಗಳ ವೇಗವರ್ಧಕ ಪಯಣವನ್ನು ಪೂರ್ಣಗೊಳಿಸಬೇಕಾಗಿದೆ.

ಈ ಕಾರ್ಯಕ್ರಮ ಪ್ರೂಫ್ ಆಫ್ ಕಾನ್ಸೆಪ್ಟ್ ಮೂಲಕ ಯಶಸ್ವಿಯಾಗಿ ಪರೀಕ್ಷಿಸಿ, ವಿಸ್ತರಣೆಯ ಆರಂಭಿಕ ಹಂತಗಳನ್ನು ಪ್ರವೇಶಿಸುತ್ತಿರುವ ಸ್ಟಾರ್ಟ್ ಅಪ್ ಗಳನ್ನು ಗುರಿಯಾಗಿಸಿಕೊಂಡು ಪ್ರೊಡಕ್ಟ್ ಮಾರುಕಟ್ಟೆ ಹೊಂದಾಣಿಕೆ, ಗ್ರಾಹಕ ಮೌಲೀಕರಣ, ಗೋ ಟು ಮಾರ್ಕೆಟ್ ತಂತ್ರ, ಮಾರುಕಟ್ಟೆ ಪ್ರವೇಶ, ಹೂಡಿಕೆ ಸಿದ್ಧತೆಯ ಮೇಲೆ ಬೆಂಬಲ ಕೇಂದ್ರೀಕರಿಸಿದೆ.

ಪ್ರತಿ ಕೊ ಹಾರ್ಟ್ನಿಂದ ಎರಡು ಅರ್ಹ ಸ್ಟಾರ್ಟ್ ಗಳು ರೂ. 10 ಲಕ್ಷದ ಕಾರ್ಯಕ್ಷಮತೆ ಆಧಾರಿತ ಅನುದಾನ ಪಡೆಯಲಿದ್ದು ಯಶಸ್ವಿ ಪೂರ್ಣಗೊಳಿಕೆ, ಅನ್ವಯಿಕ ಮಾನದಂಡಗಳು, ಅನುಮೋದನೆಗೆ ಒಳಪಟ್ಟಿದೆ.

ಕೆ ಕಾಂಬಿನೇಟರ್ ಉಪಕ್ರಮವು 5 ವರ್ಷಗಳಲ್ಲಿ ಒಟ್ಟು ರೂ.9.86 ಕೋಟಿ ಅನುಮೋದಿತ ಅನುದಾನ ಹಂಚಿಕೆಯನ್ನು ಹೊಂದಿದೆ. ಈ ಪೈಕಿ ಮೊದಲ ಕಂತಿನ 1.89 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಟಿ ಐ ಇ ಸಂಸ್ಥೆಯ ಸುಯೋಗ್ ಶೆಟ್ಟಿ, ರೋಹಿತ್ ಭಟ್, ಶ್ಯಾಂ ಪ್ರಸಾದ್ ಹೆಬ್ಬಾರ್, ಅತುಲ್ ಉಡುಪಿ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್