ಮೂಡುಬಿದಿರೆ : ಎಸ್ಎನ್ ಮೂಡಬಿದಿರೆ ಪಾಲಿಟೆಕ್ನಿಕ್‌ನ ಅರೈವಾ ಸಿವಿಲ್ ಕ್ಲಬ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ 60 ವಿದ್ಯಾರ್ಥಿಗಳು ಐದು ತಂಡಗಳಾಗಿ ವಿಭಜಿಸಿಕೊಂಡು ಹುಡ್ಕೋ ಕಾಲೋನಿ , ಕೊಡಂಗಲ್ಲು, ಪಿಲಿಪಂಜರ ಹಾಗೂ ಕೀರ್ತಿನಗರ ಪ್ರದೇಶಗಳಿಗೆ ಭೇಟಿ ನೀಡಿದರು. ಮನೆಮನೆಗೆ ತೆರಳಿ ಸ್ವಚ್ಛತೆ, ಪರಿಸರ ಶುಚಿತ್ವ, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ವಿದ್ಯಾರ್ಥಿಗಳು ಕರಪತ್ರಗಳನ್ನು ವಿತರಿಸಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

