ವಿಶ್ವ ಹಿರಿಯ ನಾಗರಿಕರ ದಿನಾಚರಣೆ

0
6

ಮೂಡಬಿದಿರೆ : ರೋಟರಿ ಕ್ಲಬ್, ರೋಟರಿ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ, ಆಗಸ್ಟ್ 21, 2026 ರಂದು ರೋಟರಿ ಸಮ್ಮಿಲನ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅರ್ಥಗರ್ಭಿತವಾಗಿ ಆಚರಿಸಲಾಯಿತು.

ರೋಟರಿ ಕ್ಲಬ್ ಹಾಗೂ ರೋಟರಿ ಶಾಲಾ ವತಿಯಿಂದ ಹಿರಿಯ ನಾಗರಿಕರಿಗೆ ಉಚಿತ ರಕ್ತದ ಗುಂಪು ತಪಾಸಣೆ ಮತ್ತು ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯುವ ಸೌಲಭ್ಯವನ್ನು ಉಚಿತವಾಗಿ ಏರ್ಪಡಿಸಲಾಯಿತು.

ಅತಿಥಿ ಭಾಷಣಕಾರರಾದ ಜೆ. ಜೆ. ಪಿಂಟೊ ಕಾರ್ಯಕ್ರಮವನ್ನು ಉದ್ಘಾಟಿಸಿ “ನಮ್ಮ ಹಿರಿಯರು, ನಮ್ಮ ಮಾರ್ಗದರ್ಶಕರು: ಅವರ ಗೌರವ, ಆರೈಕೆ – ಕಲಿಕೆ” ಎಂಬ ವಿಷಯದ ಕುರಿತು ಮಾತನಾಡಿದರು. ಇನ್ನೋರ್ವ ಅತಿಥಿ ಉದಯ್ ಕುಮಾರ್ ಅವರು ಹಿರಿಯ ನಾಗರಿಕರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳು, ಕಲ್ಯಾಣ ಯೋಜನೆಗಳು ಮತ್ತು ಸವಲತ್ತುಗಳನ್ನು ವಿವರಿಸಿದರು.

ಪ್ರವೀಣ್ ಚಂದ್ರ ಜೈನ್ ಅತಿಥಿಯನ್ನು ಸ್ವಾಗತಿಸಿದರು ಮತ್ತು ಕಾರ್ಯಕ್ರಮವನ್ನು ಯೋಜಿಸುವಲ್ಲಿ ಮತ್ತು ಆಯೋಜಿಸುವಲ್ಲಿ ಮಾರ್ಗದರ್ಶನ ನೀಡಿದರು.

ಕ್ಲಬ್ ಅಧ್ಯಕ್ಷ ಡಾ. ಆಶೀರ್ವಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹಿರಿಯ ನಾಗರಿಕರನ್ನ ಉದ್ದೇಶಿಸಿ ಮಾತನಾಡಿ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಕಾರ್ಯಕ್ರಮಕ್ಕೆ ಪ್ರೋತ್ಸಾಹವನ್ನು ನೀಡಿದರು.

ಕಾರ್ಯಕ್ರಮದಲ್ಲಿ 136 ಹಿರಿಯ ನಾಗರಿಕರು ಭಾಗವಹಿಸಿದ್ದರು ಮತ್ತು ಅವರಲ್ಲಿ 107 ಮಂದಿ ತಮ್ಮ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಕಾರ್ಯಕ್ರಮದ ಮೂಲಕ ಪಡೆದರು.

ರೋಟರಿ ಸಂಸ್ಥೆಗಳ ಮುಖ್ಯಸ್ಥರಾದ , ತಿಲಕ ಜೈನ್ , ಲಕ್ಷ್ಮಿ ಮರಾಠೆ , ರವಿ ಕುಮಾರ್ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಬೆಂಬಲಿಸಿದರು. ಆಡಳಿತ ಅಧಿಕಾರಿ ಪ್ರಫುಲ್, ವ್ಯವಸ್ಥಾಪಕ ಸತೀಶ್ , ಶಿಕ್ಷಕರು , ಇಂಟ್ರಾಕ್ಟ್ ಕ್ಲಬ್ ನ ಸದಸ್ಯರು ಮತ್ತು ಬೋಧಕೇತರ ಸಿಬ್ಬಂದಿ ಕೂಡ ತಮ್ಮ ಅಮೂಲ್ಯ ಸಹಕಾರವನ್ನು ನೀಡಿದರು.
ಅಬ್ದುಲ್ ರೌಫ್ , ರತ್ನಾಕರ ಜೈನ್ ಮತ್ತು ಸಂದೀಪ್ ನಾಯಕ್ ಸಕ್ರಿಯವಾಗಿ ಪಾಲ್ಗೊಂಡರು

ಸಮಾರಂಭದ ನಿರೂಪಣೆಯನ್ನು ಶ್ರೀ ಗಜಾನನ ಮರಾಠೆ ನಿರ್ವಹಿಸಿದರು. ಕ್ಲಬ್ ಕಾರ್ಯದರ್ಶಿ ಪ್ರಜ್ವಲ್ ಆಚಾರ್ ಅವರು ಧನ್ಯವಾದಗಳನ್ನು ಅರ್ಪಿಸಿದರು.