ಕೃಷಿ-ಖುಷಿ ಕಾರ್ಯಕ್ರಮ

0
8

ಮೂಡುಬಿದರೆ : ಕೋ ಆಪರೇಟಿವ್ ಸರ್ವಿಸ್ ಸೊಸೈಟಿ, ಕೃಷಿ ವಿಚಾರ ವಿನಿಮಯ ಕೇಂದ್ರ, ವಲಯ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಹಕಾರ ಸಪ್ತಾಹದ ಬಗ್ಗೆ ಮತ್ತು ಪರಿಸರದ ಅಭಿರುಚಿ ಮೂಡಿಸಲು ಕೃಷಿ ಕೃಷಿ ಕಾರ್ಯಕ್ರಮ ಎಂಸಿಎಸ್ ಸೊಸೈಟಿಯ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಪರಿಸರವನ್ನು ಉಳಿಸುವ ಅಗತ್ಯದ ಬಗ್ಗೆ ತಿಳಿಸಿದರು.

ಎಂ ಸಿ ಎಸ್ ಸೊಸೈಟಿಯ ಅಧ್ಯಕ್ಷ ಸಹಕಾರ ರತ್ನ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ , ಕೃಷಿ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಹಾಜರಿದ್ದರು. ತರುವಾಯ ವಿಶೇಷ ಉಪನ್ಯಾಸದಲ್ಲಿ ಪ್ರಕೃತಿ ಕೃಷಿ ವಿಸ್ಮಯದ ಬಗ್ಗೆ ಆಳ್ವಾಸ್ ಅಗ್ರಿ ಕಾಲೇಜ್ ನ ಡೀನ್ ವಾಸುದೇವ ಎನ್ ಎಸ್ ಹಾಗೂ ಕೃಷಿ ಯುವಜನತೆ ಮತ್ತು ಆಧುನಿಕತೆಯ ಬಗ್ಗೆ ಸುರತ್ಕಲ್ ನ ನಿವೃತ್ತ ಕೃಷಿ ಅಧಿಕಾರಿ ಬಶೀರ್ ಅಹ್ಮದ್ ಮಾಹಿತಿಯನ್ನು ಇತ್ತರು.

ಇದೇ ಸಂದರ್ಭದಲ್ಲಿ ನವೀನ್ ಅಂಬೂರಿ, ಚೇತನ್ ಆರ್ ಹೆಗಡೆ ಹಾಗೂ ಸಾಧನ ಮೂಡುಬಿದರೆ ವಿದ್ಯಾರ್ಥಿಗಳಿಗೆ ಕ್ವಿನ್ಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಎಂಸಿಎಸ್ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಹಾಗೂ ಸುದರ್ಶನ್ ಎಂ ಕಾರ್ಯಕ್ರಮ ಸಂಘಟಿಸಿದ್ದರು.

ವರದಿ ರಾಯಿ ರಾಜ ಕುಮಾರ್