ಮೂಡುಬಿದರೆ ಶ್ರೀ ಮಹಾವೀರ ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ ಉದ್ಘಾಟನೆ

0
7

ಮಹಾವೀರ ಕಾಲೇಜು ಟ್ರಸ್ಟ್ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನಿಂದ ಪ್ರವರ್ತಿಸಲ್ಪಡುವ ಮೂಡುಬಿದಿರೆ ಮಹಾವೀರ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ ಆಗಸ್ಟ್ 22ರಂದು ಉದ್ಘಾಟಿಸಲ್ಪಟ್ಟಿತು. ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಎಸಿಪಿ ಶ್ರೀಕಾಂತ್ ಅವರು ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನವನ್ನು ನೀಡಿದರೆ ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದು ಹಲವಾರು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು. 12 ವರ್ಷದಿಂದ 22 ವರ್ಷದ ತನಕ ಯಾವುದೇ ಕೆಟ್ಟ ಚಟಕ್ಕೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ಯಾರಾದರೂ ಅಂತಹ ಚಟಕ್ಕೆ ಬಲಿಯಾಗಿದ್ದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಅವರನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಪರೀಕ್ಷೆಯ ಅಂಕಗಳೇ ಮುಖ್ಯವಲ್ಲ. ಪರೀಕ್ಷೆಗಳಲ್ಲಿ ಫೇಲಾದವರು ಮಹಾನ್ ಸಾಧನೆಯನ್ನು ಮಾಡಿರುವುದು ನಮ್ಮ ಕಣ್ಣೆದುರೇ ಇದೆ ಎಂದು ನೆನಪಿಸಿದರು.

ಮಂಗಳೂರು ಕೆ ಸಿ ಸಿ ಐ ಅಧ್ಯಕ್ಷ ಪಿ ಬಿ ಅಹಮದ್ ಮುದಸ್ಸರ್ ಮಾತನಾಡಿ ಕ್ರಿಯಾತ್ಮಕ ಚಟುವಟಿಕೆಗಳಿಂದ ಯಶಸ್ಸು ಸಾಧ್ಯವಿದೆ. ಆದರೆ ಅದಕ್ಕಾಗಿ ಪರಿಶ್ರಮವನ್ನು ಪಡುವ ಅಗತ್ಯವಿದೆ. ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಮಹತ್ವವನ್ನು ನೀಡಿದಲ್ಲಿ ಬದುಕಿನಲ್ಲಿ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯ ಇದೆ ಎಂದು ಹಲವಾರು ಉದಾಹರಣೆಗಳ ಮೂಲಕ ತಿಳಿಸಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಭಯ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ ರಾಧಾಕೃಷ್ಣ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೀರ್ತನ್ ರಿಗೆ ಫ್ಲಾಗ್ ಅನ್ನು ಹಸ್ತಾಂತರಿಸಿದರು. ಸಮಿತಿಯ ನಿರ್ದೇಶಕ ಪ್ರೊ. ಹರೀಶ್ ಪ್ರಮಾಣವಚನ ಬೋಧಿಸಿದರು. ಪ್ರತಿಭಾನ್ವಿತರನ್ನು ಗೌರವಿಸಲಾಯಿತು ಸ್ವರ್ಣ ಲತಾ ಶೆಣೈ ಪಟ್ಟಿ ವಾಚಿಸಿದರು. ವೇದಿಕೆಯಲ್ಲಿ ಪ.ಪೂ.ಪ್ರಾಂಶುಪಾಲೆ ವಿಜಯಲಕ್ಷ್ಮಿ, ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಹಾಜರಿದ್ದರು.

ವಿದ್ಯಾರ್ಥಿ ಕಾರ್ಯದರ್ಶಿ ಬಾಲಕೃಷ್ಣ ಸ್ವಾಗತಿಸಿದರು. ವನಿತಾ, ಅನ್ವಿತ್, ಅಶ್ವಿನಿ, ಗೀತಾ ಶೆಣೈ , ಶ್ರಾವ್ಯ ಕಾರ್ಯಕ್ರಮ ನಿರ್ವಹಿಸಿದರು. ತನುಜ ವಂದಿಸಿದರು.

ವರದಿ ರಾಯಿ ರಾಜ ಕುಮಾರ್
.