ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನಿಂದ ರೋಟರಿ ಸೆಂಟ್ರಲ್ ಶಾಲೆಯಲ್ಲಿ ಆಗಸ್ಟ್ 22ರಂದು ಹುಡುಗಿಯರಿಗೆ ಹದಿ ಹರೆಯದ ಮಾಹಿತಿ ಕಾರ್ಯಕ್ರಮ ನಡೆಯಿತು. ಮಾಹಿತಿ ಕಾರ್ಯಕ್ರಮವನ್ನು ಡಾ ಸೀಮಾ ಸುದೀಪ್, ಹಾಗೂ ಪರಿಮಳ ರಾಘವೇಂದ್ರ ನಡೆಸಿಕೊಟ್ಟರು. ಪುರಸಭೆಯ ಅಧಿಕಾರಿ ಶಿಲ್ಪಾ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಹನ ಕಾರ್ಯಕ್ರಮ ನಡೆಯಿತು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಿಶ್ಮಿತಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಲಕ್ಷ್ಮಿ ಮರಾಠೆ ಸ್ವಾಗತಿಸಿದರು. ಸುಝಾನ, ಇಶಾ ಪರಿಚಯ ಗೈದರು. ವೆಲಿಶಾ ವಂದಿಸಿದರು.
ವರದಿ ರಾಯಿ ರಾಜ ಕುಮಾರ್

