ಅಲಂಗಾರಿನ ಸಂತ ಥೋಮಸ್ ಅ. ಹಿ. ಪ್ರಾ. ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 20/08/2026 ರಂದು ಕ್ರೀಡಾ ಸಮವಸ್ತ್ರ ಬಿಡುಗಡೆಗೊಳಿಸಲಾಯಿತು. ಶಾಲಾ ಸಂಚಾಲಕರಾದ ವಂದನೀಯ ಗುರು ಫಾ.ಮೆಲ್ವಿನ್ ನೊರೋನ್ಹ ರವರು, ಕ್ರೀಡಾ ಸಮವಸ್ತ್ರದ ಪ್ರಾಯೋಜಕರಾದ ಶ್ರೀ ಪಿ.ಕೆ. ತೋಮಸ್ ರವರು, ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಆಲ್ಫೋನ್ಸ ಜೋಸೆಫ್ , ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಶ್ರೀಮತಿ ಸಿಲ್ವಿಯಾ ಡೆಸಾ, ದೈಹಿಕ ಶಿಕ್ಷಕ ಶ್ರೀ ಉದಯ್ ರವರು ಹಾಗೂ ಶಿಕ್ಷಕವೃಂದ ಹಾಜರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಪ್ರಾಸ್ತವಿಕವಾಗಿ ಮಾತಾಡಿ ಎಲ್ಲರನ್ನು ಸ್ವಾಗತಿಸಿದರು.

ವಂದನೀಯ ಗುರುಗಳು ಆಶೀರ್ವಚನವನ್ನಿತ್ತು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಫಾ. ಮೆಲ್ವಿನ್ ನೊರೋನ್ಹರವರು ಹಾಗೂ ಶ್ರೀ. ಪಿ. ಕೆ. ತೋಮಸ್ ರವರು ಕ್ರೀಡಾ ಸಮವಸ್ತ್ರವನ್ನು ಬಿಡುಗಡೆಗೊಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸಮಸ್ತರಿಗೂ ಧನ್ಯವಾದ ಸಮರ್ಪಿಸಿದರು.

