ಆ. 25ರಂದು ಪುತ್ತೂರು ಸ್ವಯಂಪ್ರೇರಿತ ಬಂದ್‌ಗೆ ಹಿಂದೂ ಜಾಗರಣ ವೇದಿಕೆ ಮನವಿ

0
119

​ಪುತ್ತೂರು: ನಗರದ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ದಾಳಿ, ಪೊಲೀಸರ ಸಮ್ಮುಖದಲ್ಲೇ ಮಹಿಳೆಯ ಮೇಲಿನ ಹಲ್ಲೆ ಹಾಗೂ ಪೊಲೀಸ್ ಜೀಪಿನ ಒಳಗಿನಿಂದಲೇ ನಡೆದ ಮಾರಣಾಂತಿಕ ಹಲ್ಲೆ ಘಟನೆಗಳನ್ನು ಖಂಡಿಸಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ಆಗಸ್ಟ್ 25, 2026 (ಮಂಗಳವಾರ) ನಗರ ಸ್ವಯಂ ಪ್ರೇರಿತ ಬಂದ್ ಗೆ ಮನವಿ ಮಾಡಿದೆ.

​ಪೋಲಿಸ್ ವೈಫಲ್ಯ ಖಂಡನೆ: ಪುತ್ತೂರು ನಗರದಲ್ಲಿ ನಡೆದ ಸಾಲು ಸಾಲು ಅಮಾನವೀಯ ಘಟನೆಗಳು ಹಾಗೂ ಈ ವೇಳೆ ಪೊಲೀಸ್ ಇಲಾಖೆಯ ವೈಫಲ್ಯವನ್ನು ಸಂಘಟನೆಯು ತೀವ್ರವಾಗಿ ಖಂಡಿಸಿದೆ.

​ಪಿ.ಎಫ್.ಐ ಪಿತೂರಿ ಆರೋಪ: ಈ ಎಲ್ಲಾ ಪ್ರಕರಣಗಳ ಹಿಂದೆ ನಿಷೇಧಿತ ಪಿ.ಎಫ್.ಐ (PFI) ಸಂಘಟನೆಯ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.

​ಸ್ವಯಂಪ್ರೇರಿತ ಬಂದ್‌ಗೆ ಮನವಿ: ನಗರದಲ್ಲಿ ವರ್ತಕರ ಹಿತರಕ್ಷಣೆ ಮಾಡುವುದು, ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಂಗಳವಾರ (ಆಗಸ್ಟ್ 25) ನಡೆಯಲಿರುವ ಬಂದ್‌ಗೆ ಪುತ್ತೂರು ನಗರದ ಸಮಸ್ತ ನಾಗರಿಕರು ಹಾಗೂ ಸಮಾಜ ಬಾಂಧವರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಬೇಕಾಗಿ ಹಿಂದೂ ಜಾಗರಣ ವೇದಿಕೆ ವಿನಂತಿಸಿಕೊಂಡಿದೆ.