ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಸಂಭ್ರಮ

0
10

ಮೂಡುಬಿದಿರೆ : ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ ವಿಜಯವಾಣಿ ಪತ್ರಿಕೆಯ ವರದಿಗಾರರಾದ ಯಶೋಧರ ಬಂಗೇರ ಇವರು ವಿದ್ಯಾರ್ಥಿಗಳಿಗೆ ಮಾಧ್ಯಮ ಮತ್ತು ಅಂತರ್ಜಾಲದ ಸದ್ಬಳಕೆ ಎಂಬ ವಿಷಯದಲ್ಲಿ ಸಂವಹನ ನಡೆಸಿದರು.

ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಾರಾಮ ನಾಗರಕಟ್ಟೆ ಇವರು ಮಾದಕ ದ್ರವ್ಯಗಳ ವ್ಯಸನ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾ ವಿದ್ಯಾರ್ಥಿಗಳು ನೈತಿಕ ಮತ್ತು ಬೌದ್ಧಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಒಳ್ಳೆಯವರಾಗಿ ಬಾಳಿ ಎಂದು ಹಾರೈಸಿದರು ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ವಿ shenoy ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಉಪಸ್ಥಿತರಿದ್ದರು.