ಬಂಟ್ವಾಳ :ಜಿಲ್ಲೆಯಲ್ಲಿ ಯಕ್ಷಗಾನವು ಸಂಸ್ಕೃತಿ ಯ ಪ್ರತೀಕವಾಗಿದ್ದು, ಹಲವು ಗ್ರಾಮೀಣ ಪ್ರತಿಭೆಗಳನ್ನು ಸಮಾಜಕ್ಕೆ ಒದಗಿಸಿದೆ ಎಂದು ರಾಯಿ ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಡಿ. ರಾಮಚಂದ್ರ ಭಟ್ ದೈಲ ಹೇಳಿದ್ದಾರೆ.
ಇಲ್ಲಿನ ಕೊಯಿಲ ಯಕ್ಷ ಕೌಸ್ತುಭ ನಾಟ್ಯ ಅಧ್ಯಯನ ಕೇಂದ್ರದ ವತಿಯಿಂದ ರಾಯಿ ಶ್ರೀಯಾ ಗಾರ್ಡನ್ ಸಭಾಂಗಣದಲ್ಲಿ ಶನಿವಾರ ನಡೆದ ‘ಯಕ್ಷ ಸಂಭ್ರಮ’ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.
ಮಾವಂತೂರು ಶ್ರೀ ಮಹಾ ಗಣಪತಿ ದೇವಳದ ಆಡಳಿತ ಮೊಕ್ತೇಸರ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಯಿ ಗ್ರಾ. ಪಂ. ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಸಿದ್ದಕಟ್ಟೆ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ಕೊಯಿಲ, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಅರಳ ನವಶಕ್ತಿ ಯುವಕ ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಪಂಬದಗದ್ದೆ, ಉದ್ಯಮಿ ದೇವಪ್ಪ ಕರ್ಕೇರ ನೆಕ್ಕರೆಗುಳಿ, ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಸಂಚಾಲಕ ರವೀಂದ್ರ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಸೋಮಪ್ಪ ಮಡಿವಾಳ ರಾಯಿ, ರಾಯಿ ನಮ್ಮ ಜವನೆರ್ ಸೇವಾ ಟ್ರಸ್ಟ್ ಅಧ್ಯಕ್ಷ ದಿನೇಶ್ ಗೌಡ ದೈಲ, ಪತ್ರಕರ್ತರಾದ ಮೋಹನ್ ಕೆ. ಶ್ರೀಯಾನ್ ರಾಯಿ, ರತ್ನದೇವ್ ಪುಂಜಾಲಕಟ್ಟೆ, ಅರಳ ಶ್ರೀ ಗರುಡ ಮಹಾಕಾಳಿ ಭಜನಾ ಮಂಡಳಿ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಯಕ್ಷಗುರು ಪ್ರೇಮ್ ರಾಜ್ ಕೊಯಿಲ ಮತ್ತಿತರರು ಇದ್ದರು.
ಶಿಲ್ಪಾ ಎಸ್. ಅಂಚನ್ ಸ್ವಾಗತಿಸಿ, ನಿರಂಜನ್ ನಾಯ್ಕ್ ವಂದಿಸಿದರು. ಶಾಜಲ್ ರಾಯಿ ಕಾರ್ಯಕ್ರಮ ನಿರೂಪಿದರು.

