ದರ್ಬೆ ವರ್ತಕರ ಮೇಲಿನ ಅಮಾನುಷ ದಾಳಿ ಖಂಡಿಸಿ ಹಿಂದೂ ಜಾಗರಣ ವೇದಿಕೆ ನೀಡಿರುವ ಸ್ವಯಂ ಪ್ರೇರಿತ : ಆ. 25ರ ಬಂದ್‌ಗೆ ಪುತ್ತೂರು ಬಿಜೆಪಿ ಸಂಪೂರ್ಣ ಬೆಂಬಲ

0
24

​ಪುತ್ತೂರು : ನಗರದ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ಅಮಾನುಷ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ವರ್ತಕರಿಗೆ ಭದ್ರತೆ ಒದಗಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ವೈಫಲ್ಯವನ್ನು ಖಂಡಿಸಿ ‘ಹಿಂದೂ ಜಾಗರಣ ವೇದಿಕೆ’ಯ ವತಿಯಿಂದ ಆಗಸ್ಟ್ 25ರಂದು ಕರೆ ನೀಡಲಾಗಿರುವ ಸ್ವಯಂಪ್ರೇರಿತ ಬಂದ್‌ಗೆ ಪುತ್ತೂರು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.

ನಗರದಲ್ಲಿ ಸಾರ್ವಜನಿಕವಾಗಿ ವರ್ತಕರ ಮೇಲೆ ನಡೆದ ಹಲ್ಲೆಯು ಶಾಂತಿಪ್ರಿಯ ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ತೋರುತ್ತಿರುವ ನಿರ್ಲಕ್ಷ್ಯ ಖಂಡನೀಯ.

​ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿರುವ ಈ ಸ್ವಯಂಪ್ರೇರಿತ ಬಂದ್ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ಆದ್ದರಿಂದ ಪುತ್ತೂರು ತಾಲೂಕಿನ ಸಮಸ್ತ ಸಾರ್ವಜನಿಕರು, ವರ್ತಕರು, ಉದ್ಯಮಿಗಳು, ಅಂಗಡಿ-ಮುಂಗಟ್ಟುಗಳ ಮಾಲೀಕರು ಹಾಗೂ ವಾಹನ ಚಾಲಕರು ತಮ್ಮ ಕೆಲಸ ಕಾರ್ಯಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿ, ಈ ಬಂದ್‌ಗೆ ಪೂರ್ಣ ಪ್ರಮಾಣದ ಸಹಕಾರ ಮತ್ತು ಬೆಂಬಲ ನೀಡಬೇಕಾಗಿ ಎಂದು ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿ.ಬಿ. ಮತ್ತು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದದ ಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದ್ದಾರೆ.