ಕಲ್ಲಬೆಟ್ಟು ಶ್ರೀ ಗಣೇಶ ಸೇವಾ ಟ್ರಸ್ಟ್ ಮತ್ತು ಸ್ವರ್ಣ ಗೌರಿ ಮಾತೃ ಮಂಡಳಿ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಪ್ಟೆಂಬರ್ 14ರಂದು ಶ್ರೀ ಗಣೇಶ ಸೇವಾಧಾಮದಲ್ಲಿ ನಡೆಯಲಿದೆ. 25ನೇ ವರ್ಷದ ರಜತ ಸಂಭ್ರಮ ಜಿಕೆ ಭಟ್ ವೇದಿಕೆಯಲ್ಲಿ ನಡೆಯುತ್ತದೆ.
ಸೆಪ್ಟೆಂಬರ್ 13ರಂದು ಅಪರಾಹ್ನ ಮಾತೃ ಮಂಡಳಿ ಹಾಗೂ ಹಿಂದೂ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಅನುಷಾ ಪ್ರಜ್ವಲ್ ಆಚಾರ್ಯ ಅವರಿಗೆ ಸನ್ಮಾನ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೋಹನ್ ಹೊಸಮರು ಅವರ ನಿರ್ದೇಶನದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 14ರಂದು ಧಾರ್ಮಿಕ ಕ್ಷೇತ್ರದ ವೆಂಕಟರಾಜ ಅಸ್ರಣ್ಣ, ರಾಮಣ್ಣ ಕುಂದರ್, ಕೃಷಿ ಕ್ಷೇತ್ರದ ಸೂರ್ಯಣ್ಣ ಹೆಗ್ಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲ್ ಕೋಟ್ಯಾನ್, ವೈದ್ಯಕೀಯ ಕ್ಷೇತ್ರದ ಡಾ ಜಯಗೋಪಾಲ ತೋಳ್ಪಾಡಿ ಇವರ ಸನ್ಮಾನ ಹಾಗೂ ಮನೋರಂಜನೆ ಆಟಗಳಲ್ಲಿ ವಿಜೇತರಾದವರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಬಾಹುಬಲಿ ಪ್ರಸಾದ್ ತಿಳಿಸಿರುತ್ತಾರೆ.
ವರದಿ ರಾಯಿ ರಾಜ ಕುಮಾರ್

