ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಭೂಗತ ಲೋಕದ ನಂಟು; ಕೋಟ್ಯಂತರ ರೂ. ಗುತ್ತಿಗೆ ಕಾಮಗಾರಿ ವಿವಾದ ಬಯಲು

0
5

ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್​ ಡಿಸೋಜಾ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ನಂಟು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿ ವಿವಾದ ತನಿಖೆಯಿಂದ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಗುತ್ತಿಗೆದಾರ ಕಿಶೋರ್​ ರಾಮ್​ ಪೂಜಾರಿ ಈ ಹಿಂದೆ ಯುಪಿಸಿಎಲ್​ನಲ್ಲಿ ಕಾಮಗಾರಿ ನಡೆಸಿದ್ದ. ಪೈಪ್​ಲೈನ್​ ಹಾಗೂ ಕಾಂಕ್ರೀಟ್​ ರಸ್ತೆ ನಿಮಾರ್ಣದ ಭಾರಿ ಮೌಲ್ಯದ ಯೋಜನೆ ತನಗೇ ಸಿಗಬೇಕೆಂದು ಬಯಸಿದ್ದ. ಆದರೆ ಈ ಪ್ರಾಜೆಕ್ಟ್​ ಸಿಗದಿದ್ದಾಗ, ಡೇವಿಡ್​ ಡಿಸೋಜಾ ಹಾಗೂ ಸಂಸ್ಥೆಯ ಮೇಲೆ ವೈಮನಸ್ಸು ಬೆಳೆಸಿಕೊಂಡು ದಾಳಿಗೆ ಸಂಚು ರೂಪಿಸಿ, ಹೇಮಂತ್​ ಪೂಜಾರಿ ಎಂಬ ವ್ಯಕ್ತಿಯ ನೆರವಿನೊಂದಿಗೆ ಸುಪಾರಿ ನೀಡಿದ್ದನು ಎಂದು ತಿಳಿಸಿದರು.

ಆರೋಪಿಗಳ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಉತ್ತರ ಪ್ರದೇಶ ಶೂಟರ್​ ರಾಜು , ಮಹಾರಾಷ್ಟ್ರದ ಅನ್ಮೋಲ್​ ರಸ್ತೋಗಿ ಮತ್ತು ಬಿಹಾರ ಜಿಯಾವುಲ್​ ವಜುಲ್​ ಶೇಖ್​ ಅಲಿಯಾಸ್​ ಎ.ಎಸ್​. ದೀಪಕ್​ ಎಂಬ ಮೂವರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಆಕ್ರಮಣ ಮಾಡಲು ಯತ್ನಿಸಿದ ಶೂಟರ್​ ರಾಜು ಕಾಲಿಗೆ ಫೈರಿಂಗ್​ ನಡೆಸಿ ವಶಕ್ಕೆ ಪಡೆಯಲಾಗಿದೆ. ಬಿಹಾರ ಮೂಲದ ಅನುಜ್​ ಪಾಟೀಲ್​ ಶಾರ್ಪ್​ಶೂಟರ್​ಗಳನ್ನು ಕಿಶೋರ್​ಗೆ ಪರಿಚಯಿಸಿದ್ದನು. ಕೃತ್ಯ ನಡೆದ ತಕ್ಷಣ ಆರೋಪಿಗಳ ಖಾತೆಗೆ ಶಂಕಾಸ್ಪದವಾಗಿ ಹಣ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಆರ್ಥಿಕ ವಹಿವಾಟನ್ನು ಬೆನ್ನಟ್ಟಿದಾಗ ಇರ್ಷಾದ್​, ಚಿರಾಗ್​ ಪೂಜಾರಿ, ಸದಾನಂದ್​ ದೇವಾಡಿಗ ಹಣದ ವ್ಯವಸ್ಥೆ ಮಾಡಿಕೊಟ್ಟಿರುವುದು ಗೊತ್ತಾಗಿದೆ ಎಂದು ಹೇಳಿದರು.

ಕೃತ್ಯ ನಡೆದ ತಕ್ಷಣ ಆರೋಪಿಗಳ ಖಾತೆಗೆ ಶಂಕಾಸ್ಪದವಾಗಿ ಹಣ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಆರ್ಥಿಕ ವಹಿವಾಟನ್ನು ಬೆನ್ನಟ್ಟಿದಾಗ ಇರ್ಷಾದ್​, ಚಿರಾಗ್​ ಪೂಜಾರಿ, ಸದಾನಂದ್​ ದೇವಾಡಿಗ ಹಣದ ವ್ಯವಸ್ಥೆ ಮಾಡಿಕೊಟ್ಟಿರುವುದು ಗೊತ್ತಾಗಿದೆ ಎಂದು ಹೇಳಿದರು. ಅಡಿಶನಲ್​ ಎಸ್​ಪಿ ಸುಧಾಕರ್​ ನಾಯಕ್​ ಉಪಸ್ಥಿತರಿದ್ದರು.