ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ (ರಿ.) ಅರ್ಪಿಸುವ ಬೆದ್ರದ ಕೃಷ್ಣೋತ್ಸವ 2026 ಅಷ್ಟಮಿದ ಗೊಬ್ಬು ಹಾಗೂ ವಿವಿಧ ಸ್ಪರ್ಧೆಗಳು ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು. ದೇವಸ್ಥಾನದ ಮುಖ್ಯ ಅತಿಥಿಗಳಾಗಿ ವಕೀಲರಾದ ಶರತ್ ಶೆಟ್ಟಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಖ್ಯಸ್ಥರು ಗುರುಪ್ರಸಾದ್ ಹೊಳ್ಳ, ಉದ್ಯಮಿ ರಾಘವೇಂದ್ರ ಪ್ರಭು, ವಕೀಲರಾದ ಜಯಪ್ರಕಾಶ್ ಬಂಡಾರಿ, ಪತ್ರಕರ್ತರಾದ ಹರೀಶ್ ಆದೂರ್ , ಉದ್ಯಮಿಗಳಾದ ಅಶ್ವಿತ್ ಪೂಜಾರಿ, ಯೋಗೀಶ್ ಉಪಸ್ಥಿತರಿದ್ದರು ಸಂಸ್ಥಾಪಕರಾದ ಅಮರಕೋಟೆ ಸ್ವಾಗತಿಸಿದರು.

ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸುನಿತಾ ಉದಯ್ ಧನ್ಯವಾದ ಸಮರ್ಪಣೆ ಮಾಡಿದರು , ಸಂದೀಪ್ ಸುವರ್ಣ. ಕೆ ನಿರೂಪಣೆ ಮಾಡಿದರು. ಸಾಂಕೇತಿಕವಾಗಿ ತೆಂಗಿನಕಾಯಿ ಆಟ ಆಡುವ ಮುಖಾಂತರ ಉದ್ಘಾಟಿಸಲಾಯಿತು.

ಚಿತ್ರಕಲೆ, ಭಕ್ತಿ ಗೀತೆ, ಲಿಖಿತರ ರಸಪ್ರಶ್ನೆ, ಭಗವದ್ಗೀತೆ ಪಟ್ಟಣ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಆಟಗಳ ಅಷ್ಟಮಿಯ ಗೊಬ್ಬು ನಡೆಸಲಾಯಿತು. ಬಹುಮಾನ ವಿತರಣೆ ಕಾರ್ಯಕ್ರಮವು ಸೆಪ್ಟೆಂಬರ್ 5ನೇ ತಾರೀಖಿನಂದು ವೇಣೂರು ಕೃಷ್ಣಯ್ಯ ವೇದಿಕೆ, ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿ, ಮೂಡುಬಿದಿರೆಯಲ್ಲಿ ಮಧ್ಯಾಹ್ನ ಸರಿಯಾಗಿ 1 ಗಂಟೆಗೆ ನಡೆಯಲಿದೆ, ವಿಜೇತರು ಸರಿಯಾದ ಸಮಯಕ್ಕೆ ಬಂದು ಸಹಕಾರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


