ಯಕ್ಷಗಾನ ಆರಾಧನ ಕಲೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ-ದಿನೇಶ್ ಕೆ.ಶೆಟ್ಟಿ

0
18

ದಾವಣಗೆರೆ : ಕರಾವಳಿ ಜಿಲ್ಲೆಗಳ ಆಧ್ಯಾತ್ಮ ಪರಂಪರೆಯ ದಾಖಲೆ ಯಕ್ಷಗಾನ ಈ ಆರಾಧನ ಕಲೆ ವೀಕ್ಷಿಸಿದರೆ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ ಅಪ್ಪಟ ಕನ್ನಡ ಭಾಷೆಯಲ್ಲಿ ನಡೆಯುತ್ತಿರುವ ಈ ಯಕ್ಷಗಾನ ಪ್ರದರ್ಶನ ದೇಶ-ವಿದೇಶಗಳಲ್ಲಿ ಖ್ಯಾತ ಆಗಿದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ಅವರು ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ಮಂದರ್ತಿಯ ನಡೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಹಿಷಾಸುರ’ ಪ್ರಸಂಗ ಅತ್ಯದ್ಭುತವಾಗಿ ನಡೆಯಿತು ಎಂದು ಪ್ರೇರಣಾ ಯುವ ಸಂಸ್ಥೆಯ ಅಧ್ಯಕ್ಷರಾದ ಎಸ್.ಟಿ. ವೀರೇಶ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಸಮಾರಂಭದ ವೇದಿಕೆಯಲ್ಲಿ ಯಕ್ಷರಂಗ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ, ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಭಾ1ಗವತರಾದ ಸದಾಶಿವ ಅಮೀನ್ ಸಕ್ಕಟ್ಟು, ಪ್ರತಿಷ್ಠಾನದ ನಿರ್ದೇಶಕರಾದ ರಾಜಶೇಖರ ಸಕ್ಕಟ್ಟು, ಶ್ರೀನಿವಾಸ ದಾಸಕರಿಯಪ್ಪ ಮುಂತಾದವರು ಮಾತನಾಡಿ ಯಕ್ಷಗಾನ ಅಪ್ಪಟ ದೈವಿ ಕಲೆಯ ಶ್ರೀಮಂತಿಕೆ ಮತ್ತು ಕನ್ನಡ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವಲ್ಲಿ ಯಕ್ಷಗಾನ ಕಲಾವಿದರ ಪಾತ್ರ ಮಹತ್ವದ್ದು ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಕ್ಕಟ್ಟು ಶ್ರೀ ಲಕ್ಷ್ಮಿನಾರಾಯಣ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನದ ಸಂಘಟನೆಗಾರರು, ಭಾಗವತರಾದ ಸದಾಶಿವ ಅಮೀನ್ ರವರನ್ನು ಸನ್ಮಾನಿಸಲಾಯಿತು.

ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗ ಮತ್ತು ಪ್ರೇರಣಾ ಯುವ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನ ವಿಜೃಂಭಣೆಯಿಂದ ಶ್ರೀದೇವಿ ಮಹಾತ್ಮೆ‘’ ಮಹಿಷಾಸುರ ನಡೆದ ಕಲಾಭಿಮಾನಿಗಳು, ನಾಗರಿಕರು, ವಿದ್ಯಾರ್ಥಿಗಳು ಸಂಭ್ರಮಿಸಿದರು. ಯಕ್ಷರಂಗದ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ ಶೆಟ್ಟಿ ಯವರು ಸ್ವಾಗತಿಸಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು. ಯಕ್ಷರಂಗದ ಸಮಿತಿ ಸದಸ್ಯ ಯಕ್ಷಗಾನ ಕಲಾವಿದರಾದ ಪ್ರದೀಪ್ ಕೆ.ವಿ. ಕಾರಂತ್‌ರವರು ನೆರೆದ ಪ್ರೇಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕರಾವಳಿ ಜಿಲ್ಲೆಗಳ ಯಕ್ಷಗಾನದ ವಿಶೇಷತೆ ಹಾಗೂ ಪ್ರಸಂಗದ ಪರಿಚಯವನ್ನು ಮಾಡಿಕೊಟ್ಟರು.

  1. ↩︎