ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ , ಭಜನಾ ಮಹೋತ್ಸವ 126 ವರ್ಷದ ಆಚರಣೆ 8 ದಿನಗಳ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ವೈಭವದಿಂದ ನೆಡೆದು ಮಂಗಳವಾರ ಭಜನಾ ಮಂಗಳೋತ್ಸವ ನೆಡೆಯಿತು , ಶ್ರೀದೇವರಿಗೆ ಶ್ರೀ ದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು , ಭಜನಾ ಮೊಹೋತ್ಸವದ ಶ್ರೀ ವಿಠೋಬಾ ರುಖುಮಾಯಿ ದೇವರಿಗೆ ಆರತಿ ಬೆಳಗಿಸಿ ಮಂಗಲೋತ್ಸವಕ್ಕೆ ಚಾಲನೆ ನೀಡಲಾಯಿತು , ಧಾರ್ಮಿಕ ಪೂಜಾ ವಿಧಾನಗಳನ್ನು ದಯಾಘನ್ ಭಟ್ ನೆರವೇರಿಸಿದರು , ಶ್ರೀದೇವರ ಉತ್ಸವ ಮೂರ್ತಿ ಯೊಂದಿಗೆ ನೂರಾರು ಭಕ್ತರೂ ಭಕ್ತಿ ಸಡಗರದಿಂದ ಜೈ ವಿಠಲ್ , ಹರಿ ವಿಠಲ್ ಸ್ಮರಣೆ ಯೊಂದಿಗೆ ಸುಮಾರು 500 ಕ್ಕೊ ಹೆಚ್ಚಿನ ಭಕ್ತರೊ ದೇವಳದ ಹೊರಾಂಗಣ ಮತ್ತು ಒಳಾಂಗಣ ಸುತ್ತು ಮಡಸ್ತಾನ ಸೇವೆ ( ಭಕ್ತರಿಂದ ಉರುಳು ಸೇವೆ ) ನೆಡೆಸಿದರು.

ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ದೇವಳದ ಧರ್ಮದರ್ಶಿ ಗುಜ್ಜಾಡಿ ಪ್ರಭಾಕರ್ ನಾಯಕ್ , ಹಾಗೂ ಆಡಳಿತ ಮಂಡಳಿಯ ಸದಸ್ಯರು , ದೀಪಕ್ ಭಟ್ , ಗಿರೀಶ್ ಭಟ್ , ವಿವೇಕಾನಂದ ಶಾನ್ ಭೋಗ್ , ಭಾಸ್ಕರ್ ಶೆಣೈ , ಉಮೇಶ್ ಪೈ , ಗಣೇಶ್ ಕಿಣೆ , ನರಸಿಂಹ ಕಿಣಿ , ಪ್ರಭಾಕರ್ ಭಟ್ ಹಾಗೂ , ಜಿ ಎಸ್ ಬಿ ಯುವಕ ಮಂಡಳಿಸದಸ್ಯರು , ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಭಜನಾ ಮಹೋತ್ಸವ ಸಮಿತಿಯ ಸದಸ್ಯರು , ಊರ ಪರಊರ ನೂರಾರು ಭಜನಾ ಮಂಡಳಿಯ ಸದಸ್ಯರು , ಸಾವಿರಾರು ಸಮಾಜ ಬಾಂದವರು ಉಪಸ್ಥರಿದ್ದರು.

