ಶ್ರೀ ದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರ ; ಮಡಸ್ತಾನ ಸೇವೆ

0
2

ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ , ಭಜನಾ  ಮಹೋತ್ಸವ  126  ವರ್ಷದ ಆಚರಣೆ 8 ದಿನಗಳ  ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ವೈಭವದಿಂದ ನೆಡೆದು ಮಂಗಳವಾರ  ಭಜನಾ  ಮಂಗಳೋತ್ಸವ ನೆಡೆಯಿತು ,  ಶ್ರೀದೇವರಿಗೆ     ಶ್ರೀ ದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀ ವೆಂಕಟೇಶ    ವಿಶೇಷ ಅಲಂಕಾರ ಮಾಡಿ ಮಹಾಪೂಜೆ  ನೆರವೇರಿಸಿದರು ,  ಭಜನಾ ಮೊಹೋತ್ಸವದ ಶ್ರೀ ವಿಠೋಬಾ ರುಖುಮಾಯಿ ದೇವರಿಗೆ  ಆರತಿ ಬೆಳಗಿಸಿ  ಮಂಗಲೋತ್ಸವಕ್ಕೆ ಚಾಲನೆ ನೀಡಲಾಯಿತು , ಧಾರ್ಮಿಕ ಪೂಜಾ ವಿಧಾನಗಳನ್ನು  ದಯಾಘನ್  ಭಟ್  ನೆರವೇರಿಸಿದರು  , ಶ್ರೀದೇವರ ಉತ್ಸವ ಮೂರ್ತಿ ಯೊಂದಿಗೆ ನೂರಾರು ಭಕ್ತರೂ ಭಕ್ತಿ ಸಡಗರದಿಂದ ಜೈ ವಿಠಲ್ , ಹರಿ ವಿಠಲ್ ಸ್ಮರಣೆ ಯೊಂದಿಗೆ  ಸುಮಾರು 500 ಕ್ಕೊ ಹೆಚ್ಚಿನ ಭಕ್ತರೊ    ದೇವಳದ ಹೊರಾಂಗಣ ಮತ್ತು ಒಳಾಂಗಣ ಸುತ್ತು  ಮಡಸ್ತಾನ ಸೇವೆ ( ಭಕ್ತರಿಂದ ಉರುಳು ಸೇವೆ )  ನೆಡೆಸಿದರು. 

ಭಜನಾ ಮೊಹೋತ್ಸವದ ಅಧ್ಯಕ್ಷ  ಮಟ್ಟಾರ್ ಸತೀಶ್ ಕಿಣಿ  , ದೇವಳದ ಧರ್ಮದರ್ಶಿ ಗುಜ್ಜಾಡಿ ಪ್ರಭಾಕರ್ ನಾಯಕ್  , ಹಾಗೂ  ಆಡಳಿತ ಮಂಡಳಿಯ ಸದಸ್ಯರು , ದೀಪಕ್ ಭಟ್ , ಗಿರೀಶ್ ಭಟ್ , ವಿವೇಕಾನಂದ ಶಾನ್ ಭೋಗ್ , ಭಾಸ್ಕರ್ ಶೆಣೈ , ಉಮೇಶ್ ಪೈ  , ಗಣೇಶ್ ಕಿಣೆ , ನರಸಿಂಹ ಕಿಣಿ , ಪ್ರಭಾಕರ್ ಭಟ್    ಹಾಗೂ    , ಜಿ  ಎಸ್  ಬಿ  ಯುವಕ ಮಂಡಳಿಸದಸ್ಯರು   , ಭಗಿನಿ ವೃಂದ  , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು  ,  ಭಜನಾ ಮಹೋತ್ಸವ ಸಮಿತಿಯ ಸದಸ್ಯರು ,  ಊರ  ಪರಊರ  ನೂರಾರು ಭಜನಾ ಮಂಡಳಿಯ ಸದಸ್ಯರು  , ಸಾವಿರಾರು ಸಮಾಜ ಬಾಂದವರು ಉಪಸ್ಥರಿದ್ದರು.