ಬಂಟ್ವಾಳ ತಾಲ್ಲೂಕಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಕರ್ಪೆ ಸಮೀಪದ ಕುಟ್ಟಿಕಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಉಚಿತ ಬ್ಯಾಗ್ ವಿತರಿಸಲಾಯಿತು.
ಕ್ಲಬ್ಬಿನ ಅಧ್ಯಕ್ಷೆ ಗೀತಾ ಪಿ.ಬಲ್ಲಾಳ್, ಕೋಶಾಧಿಕಾರಿ ಕೆ.ರಮೇಶ ನಾಯಕ್ ರಾಯಿ, ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮಾಜಿ ಕಾರ್ಯದಶರ್ಿ ಮೋಹನ್ ಕೆ.ಶ್ರೀಯಾನ್ ರಾಯಿ, ಸದಸ್ಯೆ ಸುಮಿತ್ರಾ ಆರ್.ಶೆಟ್ಟಿಗಾರ್, ಮುಖ್ಯಶಿಕ್ಷಕ ರುಡಾಲ್ಫ್ ದೇವಾನಂದ ಮತ್ತಿತರರು ಇದ್ದರು.

