ಸುರತ್ಕಲ್ : ಸಿವಿಲ್ ಕಂಟ್ರಾಕ್ಟರ್, ಉದ್ಯಮಿ ಸುರತ್ಕಲ್ ಬಂಟರ ಸಂಘದ ಮಾಜಿ ಉಪಾಧ್ಯಕ್ಷ ಈರಯ್ಯ ಟಿ ಶೆಟ್ಟಿ ( ಈ. ಟಿ ಶೆಟ್ಟಿ) ಪಂಜ (70) ಅವರು ಸುರತ್ಕಲ್ ಕಾನ ಕಟ್ಲದಲ್ಲಿರುವ ತನ್ನ ಸ್ವಗೃಹದಲ್ಲಿ ಇಂದು ಮಧ್ಯಾಹ್ನ ನಿಧನ ಹೊಂದಿದರು.
ಇವರು ಪತ್ನಿ, ಮೂವರು ಪುತ್ರರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಧಾರ್ಮಿಕ ಮುಖಂಡ ಊರಿನ ಸಮಾಜಮುಖಿ ಕೆಲಸ ಮಾಡಿ ರಾಜಕೀಯದಲ್ಲೂ ಸಹಿ ಎನಿಸಿದ್ದರು. ಸುರತ್ಕಲ್ ಬಂಟರ ಸಂಘದ ಸ್ಥಾಪಕ ಸದಸ್ಯರಾಗಿ, ಉಪಾಧ್ಯಕ್ಷರಾಗಿ ದುಡಿದಿದ್ದರು. 2001 ರಲ್ಲಿ ಸುರತ್ಕಲ್ ಬಂಟರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಬಂಟರ ಕಲೋತ್ಸವದಲ್ಲಿ ಅವರು ತನ್ನನ್ನು ತೊಡಗಿಸಿಕೊಂಡು ಕಲೋತ್ಸವದ ಯಶಸ್ಸಿಗೆ ಕಾರಣರಾಗಿದ್ದರು.
ಸ್ಥಳಿಯ ಸಂಘ ಸಂಸ್ಥೆಗಳಿಗೆ, ಮಂದಿರಗಳಿಗೆ ಇವರ ಕೊಡುಗೆ ಅಪಾರವಾಗಿದ್ದು. ಇವರ ನಿಧನ ಪಂಜ ಕೊಯಿಕುಡೆ ಗ್ರಾಮದ ಊರಿಗೆ ತೀವ್ರ ಅಘಾತವನ್ನುಂಟು ಮಾಡಿದೆ. ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆಮ್ರಾಲ್ ಗ್ರಾಮ ಪಂಚಾಯತ್ ಸದಸ್ಯರಾಗಿ ,pwd ಗುತ್ತಿಗೆದಾರರಾಗಿ ಊರಿಗೆ ದಾರಿದೀಪ, ರಸ್ತೆ ಇನ್ನಿತರ ಮೂಲ ಸೌಲಭ್ಯವನ್ನು ದೊರಕಿಸಿ ಕೊಡುವಲ್ಲಿ ಸಫಲರಾಗಿದ್ದಾರೆ. ಅಲ್ಲಿಯ ಸಂಘ ಸಂಸ್ಥೆಗಳಾದ ವಿಠೋಬಾ ಭಜನಾ ಮಂಡಳಿ, ನವಜೋತಿ ಮಹಿಳಾ ಮಂಡಲ, ಶನೇಶ್ವರ ಮಂಡಳಿ , ಪಂಜ ಕೊಯಿಕುಡೆ. ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಪಂಜ ಕೊಯಿಕುಡೆ ಊರಿನ ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಬಂಟರ ಸಂಘ ಸಂತಾಪ
ಈ ಟಿ ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ಏಳಿಗೆಗಾಗಿ ಅವಿರತವಾಗಿ ದುಡಿದಿದ್ದರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸುರತ್ಕಲ್ ಬಂಟರ ಸಂಘ ತಿಳಿಸಿದೆ. ಸುರತ್ಕಲ್ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕುಳಾಯಿಗುತ್ತು ರೋಹಿತಾಕ್ಷ ರೈ, ಮಾಜಿ ಅಧ್ಯಕ್ಷರಾದ ಎಮ್ ದೇವಾನಂದ ಶೆಟ್ಟಿ, ಉಲ್ಲಾಸ್ ಶೆಟ್ಟಿ ಸುಧಾಕರ ಪೂಂಜ, ಲೋಕಯ್ಯ ಶೆಟ್ಟಿ, ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಪದಾಧಿಕಾರಿಗಳಾದ ಲೀಲಾಧರ ಶೆಟ್ಟಿ, ರತ್ನಾಕರ ಶೆಟ್ಟಿ, ಪುಷ್ಪರಾಜ ಶೆಟ್ಟಿ ಕುಡುಂಬೂರು_ಅಶೋಕ್ ಶೆಟ್ಟಿ ತಡಂಬೈಲ್, ಪ್ರವೀಣ್ ಶೆಟ್ಟಿ, ದೇವೇಂದ್ರ ಶೆಟ್ಟಿ, ಗಿರೀಶ್ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ ಮೃತರ ಅಂತ್ಯ ಸಂಸ್ಕಾರ ನಾಳೆ ಪಂಜದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.

