ಮುಲ್ಕಿ : ಸೌಹಾರ್ದತೆ ಮತ್ತು ಧರ್ಮದ ನೆಲೆವೀಡಾದ ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಹಾಗೂ ಸಂದೇಶಗಳನ್ನು ಸಾರುವ
“ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತ್ರೆ (ಭಾಗ-1)” ಗ್ರಂಥ ಲೋಕಾರ್ಪಣೆ ಶುಕ್ರವಾರ ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದಲ್ಲಿ ನಡೆಯಿತು. ಕ್ಷೇತ್ರದ ಅರ್ಚಕ ಪ್ರಸಾದ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮನಾಥ್ ಕೋಟ್ಯಾನ್ , ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ ಒಂದೇ ಜಾತಿ, ಒಂದೇ ಮತ ಒಂದೇ ದೇವರು ಎಂದು ಇಡೀ ವಿಶ್ವಕ್ಕೆ ಸಾರಿ, ಸಂತರಾಗಿ ಸಮಾಜದಲ್ಲಿರುವ ಅಸ್ಪೃಶ್ಯತೆಗಳನ್ನು ದೂರ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಯುವ ಜನಾಂಗ ಪರಿಪಾಲಿಸಬೇಕಾಗಿದೆ ಎಂದರು.

ಈ ಸಂದರ್ಭ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ , ಗೋಪಾಲಕೃಷ್ಣ ಭಟ್,ಅಭಿವೃದ್ಧಿ ಸಮಿತಿಯ ಸುನಿಲ್ ಆಳ್ವ, ಲಂಡನ್ ಬಿಲ್ಲವರ ಎಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಡಾ. ಪಿಕೆ..ಮನೋಜ್ ಪೂಜಾರಿ,ಮುಂಬೈ ಬಿಲ್ಲವ ಎಸೋಸಿಯೇಷನ್ ಐ ಟಿ ಸೆಲ್ ಚೇರ್ ಮ್ಯಾನ್ ಸುರೇಶ್ ಅಂಚನ್, ರಂಗ ಕರ್ಮಿ ಚಂದ್ರಶೇಖರ್ ಸುವರ್ಣ, ಪುರುಷೋತ್ತಮ ಬಡಗುಹಿತ್ಲು, ಶೈಲೇಶ್ ಕುಮಾರ್, ಸಂಜೀವ ದೇವಾಡಿಗ, ಪ್ರಕಾಶ್ ದೇವಾಡಿಗ, ವಾಸು ಪೂಜಾರಿ ಕೊಲಕಾಡಿ, ನವೀನ್ ರಾಜ್,ಶ್ಯಾಮ್ ಪ್ರಸಾದ್ ಪಡು ಪಣಂಬೂರು ,ದಯಾನಂದ, ಅಶೋಕ್ ಜನನಿ, ಮಹಾಬಲ ಕರ್ಕೇರ ,ಜಯರಾಮ್ ಬಿಎಸ್,ಹಾಗೂ ಬಪ್ಪನಾಡು ದುರ್ಗಾ ಪಾರಾಯಣ ಸೇವಾ ಟ್ರಸ್ಟ್, ಹಾಗೂ ಸಮಸ್ತ ಭಕ್ತವೃಂದದ ಸದಸ್ಯರು ಉಪಸ್ಥಿತರಿದ್ದರು.

