ಸೆ.06ರಂದು ನೆಲ್ಲಿಕಟ್ಟೆಯಲ್ಲಿ 25ನೇ ವರ್ಷದ ಮೊಸರು ಕುಡಿಕೆ ಸಂಭ್ರಮ

0
22

ಹಿರ್ಗಾನ : ಶ್ರೀ ದತ್ತ ಮಂದಿರ ನೆಲ್ಲಿಕಟ್ಟೆ ಹಿರ್ಗಾನ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನೆಲ್ಲಿಕಟ್ಟೆಯ ಶ್ರೀ ದತ್ತ ಮಂದಿರದಲ್ಲಿ ಸೆಪ್ಟೆಂಬರ್ 6ರಂದು 25ನೇ ವರ್ಷದ ಮೊಸರು ಕುಡಿಕೆ ಮಹೋತ್ಸವವು ನಡೆಯಲಿದೆ.

ಭಾನುವಾರ ನಡೆಯಲಿರುವ ಮಹೋತ್ಸವದ ಅಂಗವಾಗಿ ಮಧ್ಯಾಹ್ನ 12 ಗಂಟೆಯಿಂದ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅನ್ನಸಂತರ್ಪಣೆ ಸೇವೆಯನ್ನು ಹಾಗೂ ವಿದ್ಯಾನಂದ ಕಡಂಬ ಮತ್ತು ಮಕ್ಕಳು, ಕೊಲಂಪಿಲ ಇವರು ನೆರವೇರಿಸಲಿದ್ದಾರೆ.

ಮಹೋತ್ಸವದ ಅಂಗವಾಗಿ ಮಕ್ಕಳಿಗಾಗಿ ಮುದ್ದು ಕೃಷ್ಣ ಸ್ಪರ್ಧೆ, ಯುವಕರು ಹಾಗೂ ಸಾರ್ವಜನಿಕರಿಗಾಗಿ ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಮೋಜಿನ ಆಟಗಳು ನಡೆಯಲಿವೆ.