ಕ್ರೀಡಾ ಭಾರತಿ ಹೆಬ್ರಿ ತಾಲೂಕು ಮತ್ತು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಇವರ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ನಡೆಸಿದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಬಹುಮಾನ ಪಡೆದು, ಜಾವಲಿನ್ ತ್ರೋ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಕುಮಾರ ನಿತಿಶ್ ಅವರ ತಾಯಿ ಶ್ರೀಮತಿ ಜ್ಯೋತಿ ಯವರಿಗೆ ಜೀಜಾ ಮಾತಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕ್ರೀಡಾ ಭಾರತಿ ಹೆಬ್ರಿ ತಾಲೂಕು ಗೌರವಾಧ್ಯಕ್ಷರು , ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿಗಳು ಆದ ಗುರುದಾಸ್ ಶಣೈ ಸಭಾ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾದ ಎಚ್. ಸೀತಾರಾಮ ಶೆಟ್ಟಿ ಬಾರ್ಕೂರು, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಟಿ ಜಿ ಪಾಂಡುರಂಗ ಪೈ ಸಿದ್ದಾಪುರ, ಕ್ರೀಡಾ ಭಾರತಿ ಅಧ್ಯಕ್ಷರಾದ ಸೀತಾನದಿ ವಿಠಲ್ ಶೆಟ್ಟಿ , ಟ್ರಸ್ಟಿಗಳಾದ ಯೋಗೇಶ್ ಭಟ್, ಸುಧೀರ್ ನಾಯಕ್, ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಕ್ರೀಡಾ ಭಾರತಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ ,ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್ ಜೋಗಿ, ಅರುಣ್ ಎಚ್ ವೈ , ಅಪರ್ಣ ಆಚಾರ್, ಶಕುಂತಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿ , ದೈಹಿಕ ಶಿಕ್ಷಣ ಶಿಕ್ಷಕ ಎಂ ರವೀಂದ್ರ ಶೆಟ್ಟಿ ವಂದಿಸಿದರು

