ಉಡುಪಿ: ಮಾನವೀಯ ಸೇವೆಯ ಮೂಲಕ ಗುರುತಿಸಿಕೊಂಡಿರುವ ಅನ್ನಬ್ರಹ್ಮ ಸೇವಾ ಸಮಿತಿ, ಉಡುಪಿ ಇದರ ವತಿಯಿಂದ ಬ್ರಹ್ಮಾವರ ಶಿರೂರಿನ ಬಡ ಬಂಟ ಸಮುದಾಯದ ಹೆಣ್ಣು ಮಗಳ ಮದುವೆಗೆ ನೆರವಾಗುವ ಕಾರ್ಯ ನಡೆಯಿತು.
ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಲತಾ ಶೆಟ್ಟಿ ಅವರ ನೇತೃತ್ವದಲ್ಲಿ ಇಂದು ಆ ಕುಟುಂಬದ ಮನೆಗೆ ಭೇಟಿ ನೀಡಿ, ಮದುವೆಗೆ ಅವಶ್ಯಕವಾದ ದಾರೆ ಸೀರೆ, ಮೂರ್ತ ಸೀರೆ ಸೇರಿದಂತೆ ಒಟ್ಟು ಐದು ಸೀರೆಗಳನ್ನು ನೀಡಿ ಮಾನವೀಯತೆ ಮೆರೆದರು.

ಈ ಪುಣ್ಯ ಕಾರ್ಯದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ವಿಶಾಲಾಕ್ಷಿ ಶೆಟ್ಟಿ, ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ, ಗೌರವಾಧ್ಯಕ್ಷರಾದ ಅನುಪಮಾ ಜಯಕುಮಾರ್,
ಹಿತೈಷಿಗಳಾದ ಜಯಶ್ರೀ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅರ್ಚನಾ ದೇವಾಡಿಗ, ಕೋಶಾಧಿಕಾರಿ * ಶ್ರೇಯ ಪೂಜಾರಿ* ಹಾಗೂ ಭವಿಷ್ ಉಪಸ್ಥಿತರಿದ್ದರು.
ಬಡ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ಸಕಾಲದಲ್ಲಿ ನೆರವಾದ ಅನ್ನಬ್ರಹ್ಮ ಸೇವಾ ಸಮಿತಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ವಿನೋದ್ ಶೆಟ್ಟಿ, ಉಡುಪಿ

