ಸ್ವಚ್ಛ ಸಾಣೂರು ಪರಿಕಲ್ಪನೆಯಡಿ ಯುವಕ ಮಂಡಲದಿಂದ ಸ್ವಚ್ಛತಾ ಅಭಿಯಾನ

0
1

ಸಾಣೂರು: ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ನೇತೃತ್ವದಲ್ಲಿ ಸ್ವಚ್ಛ ಸಾಣೂರು ಪರಿಕಲ್ಪನೆಯಡಿ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಪಿ. ಯು ಕಾಲೇಜು ಸಾಣೂರು ಹಾಗೂ ಸಾಣೂರು ಕ್ಯಾಶ್ಯೂ ಮತ್ತು ಆದರ್ಶ್ ಕೆಮಿಕಲ್ ಇಂಡಸ್ಟ್ರಿಯಲ್ ಸಾಣೂರು ಇವರ ಸಹಬಾಗಿತ್ವದಲ್ಲಿ ದಿನಾಂಕ 30/8/2026 ರಂದು ಬೆಳಿಗ್ಗೆ 7.00 ಗಂಟೆಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು 1 ಇಲ್ಲಿನ ಕುಡಿಯುವ ನೀರಿನ ಟ್ಯಾಂಕ್, ಶಾಲಾ ಕಟ್ಟಡದ ಮೇಲ್ಚಾವಣಿ ಸ್ವಚ್ಛತೆ , ಸಾರ್ವಜನಿಕ ಶೌಚಾಲಯ ಸ್ವಚ್ಛತೆ ಹಾಗೂ ಸಾಣೂರು ರಿಕ್ಷಾ ನಿಲ್ದಾಣದಿಂದ ಸಾಣೂರು ಗುತ್ತು ಸಂಪರ್ಕ ರಸ್ತೆವರೆಗೆ ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಣೂರು ಕ್ಯಾಶ್ಯುನ ಶ್ರೀ ಶುಕ್ಲಂಭರ ಪ್ರಭು ಮಾತನಾಡಿ ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯ ನಾಗರಿಕರು ಸ್ವಯಂ ಪ್ರಜ್ಞೆಯಿಂದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಾಗ ಸ್ವಚ್ಛ ಭಾರತದ ಪರಿಕಲ್ಪನೆ ಈಡೇರುತ್ತದೆ ಎಂದರು. ಸ್ವಚ್ಛ ಸಾಣೂರಿನ ದೂರ ದೃಷ್ಟಿಯಿಂದ ಸದಾ ಸ್ವಚ್ಛತಾ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಸಾಣೂರು ಯುವಕ ಮಂಡಲದ ಜೊತೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ವಿನಂತಿಸಿದರು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಪಿ. ಯು ಕಾಲೇಜಿನ 35 ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರು ಹಾಗೂ ಯುವಕ ಮಂಡಲದ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ,ಕಾರ್ಯದರ್ಶಿ ರಾಜೇಶ್, ಮಾಜಿ ಅಧ್ಯಕ್ಷರಾದ ಜಗದೀಶ್ ಕುಮಾರ್ ಗಣೇಶ್ ನಾಯಕ್ , ಜೊತೆ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ ಸಾಂಸ್ಕೃತಿಕ ಕಾರ್ಯದರ್ಶಿ ಮುರಳೀಧರ ಸುವರ್ಣ ಸದಸ್ಯರಾದ ಪ್ರಕಾಶ್ ರಾವ್, ಜಯನ್ ಶೆಟ್ಟಿ, ರಮೇಶ್ ಪೂಜಾರಿ, ಸುದರ್ಶನ್ ನಾಯ್ಕ್, ಪ್ರಸನ್ನ ಆಚಾರ್ಯ, ಜಿತೇಶ್ ರಾವ್, ಪ್ರಭಾಕರ್ ಶೆಟ್ಟಿ, ಜೀವನ್ ರಾವ್ ಅಲೋಪ್,ಆರ್ಯನ್ ಮೊದಲಾದವರು ಉಪಸ್ಥಿತರಿದರು ವಿಶೇಷವಾಗಿ ಕ್ರೀಡಾ ಕಾರ್ಯದರ್ಶಿಯಾದ ವಿದ್ಯಾನಂದ ಕೋಟ್ಯಾನ್ ಹುಲ್ಲು ಕಟ್ಟಿಂಗ್ ಮಿಷನ್ ಬಳಸಿ ಸ್ವಚ್ಛತೆಗೆ ಸಹಕರಿಸಿದರು.