ಕೌಶಲ್ಯವನ್ನು ಉದ್ಯಮವಾಗಿ ಪರಿವರ್ತಿಸಿಕೊಂಡು ಅಸಾಮಾನ್ಯ ಸಾಧನೆ ಮಾಡಿ: ಪ್ರತಾಪ್ ಸಿಂಹ ನಾಯಕ್

0
26

ರುಡ್ಸೆಟ್ನ 1000ನೇ ಫೋಟೋಗ್ರಫಿ–ವಿಡಿಯೋಗ್ರಫಿ ಹಾಗೂ 998ನೇ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ತಂಡಗಳ ಸಮಾರೋಪ

ಉಜಿರೆ: “ಸಾಮಾನ್ಯ ವ್ಯಕ್ತಿ ಅವಕಾಶಕ್ಕಾಗಿ ಕಾಯುತ್ತಾನೆ; ಅಸಾಮಾನ್ಯ ವ್ಯಕ್ತಿ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾನೆ. ನೀವು ಪಡೆದಿರುವ ಕೌಶಲ್ಯವನ್ನು ಕೇವಲ ಉದ್ಯೋಗಕ್ಕಾಗಿ ಬಳಸದೆ, ಉದ್ಯೋಗ ಸೃಷ್ಟಿಸುವ ಶಕ್ತಿಯಾಗಿ ಪರಿರ‍್ತಿಸಿಕೊಳ್ಳಬೇಕು” ಎಂದು ರ‍್ನಾಟಕ ವಿಧಾನ ಪರಿಷತ್ತಿನ ನಿಕಟಪರ‍್ವ ಸದಸ್ಯರು, ಕೇಂದ್ರೀಯ ನೋಟರಿ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ವತಿಯಿಂದ ಆಯೋಜಿಸಲಾಗಿದ್ದ 1000ನೇ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ತಂಡ ಹಾಗೂ 998ನೇ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ತರಬೇತಿ ತಂಡದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

“ತರಬೇತಿ ಮುಗಿದಿದೆ ಎಂದರೆ ಕಲಿಕೆ ಮುಗಿದಿದೆ ಎಂದಲ್ಲ; ಇಂದಿನಿಂದ ನಿಮ್ಮ ನಿಜವಾದ ಪರೀಕ್ಷೆ ಆರಂಭವಾಗಿದೆ. ತರಬೇತಿ ಕೇಂದ್ರದಲ್ಲಿ ಕಲಿತ ಜ್ಞಾನವನ್ನು ನಿಮ್ಮ ಬದುಕಿನಲ್ಲಿ ಮತ್ತು ಮಾರುಕಟ್ಟೆಯಲ್ಲಿ ಬಳಸಿಕೊಂಡು ಆದಾಯ ಗಳಿಸಿದಾಗ ಮಾತ್ರ ಆ ತರಬೇತಿಗೆ ನಿಜವಾದ ರ‍್ಥ ಬರುತ್ತದೆ” ಎಂದು ಅವರು ಹೇಳಿದರು.

ಇಂದಿನ ಸ್ರ‍್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಹೊಂದಿರುವುದು ಸಾಕಾಗುವುದಿಲ್ಲ. “ಆegಡಿee ನಿಮ್ಮ ವಿದ್ಯರ‍್ಹತೆಯನ್ನು ತೋರಿಸುತ್ತದೆ; Sಞiಟಟ ನಿಮ್ಮ ಸಾರ‍್ಥ್ಯವನ್ನು ತೋರಿಸುತ್ತದೆ; ಆದರೆ ನಿಮ್ಮ ಕೆಲಸದ ಗುಣಮಟ್ಟವೇ ನಿಮ್ಮ ಗುರುತನ್ನು ನರ‍್ಮಿಸುತ್ತದೆ” ಎಂದರು.

ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಿದೆ. ಮೊಬೈಲ್ ಫೋನ್ನಿಂದ ಅತ್ಯಾಧುನಿಕ ಕ್ಯಾಮೆರಾಗಳವರೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಅದೇ ರೀತಿ ಕಂಪ್ಯೂಟರ್ ಅಕೌಂಟಿಂಗ್, ಉSಖಿ ಹಾಗೂ ಡಿಜಿಟಲ್ ಸೇವೆಗಳಿಗೂ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ತಂತ್ರಜ್ಞಾನ ಬದಲಾಗುವ ವೇಗಕ್ಕೆ ನಾವು ನಮ್ಮ ಕೌಶಲ್ಯವನ್ನು ಬದಲಾಯಿಸಿಕೊಂಡು ಮುಂದೆ ಸಾಗಬೇಕು ಎಂದು ಅವರು ತಿಳಿಸಿದರು.

“ಬೇರೆಯವರು ಏನು ಮಾಡುತ್ತಿದ್ದಾರೆ ಎಂದು ನೋಡುವುದಕ್ಕಿಂತ, ನಾನು ಹೊಸದಾಗಿ ಏನು ಮಾಡಬಹುದು ಎಂದು ಯೋಚಿಸಿ. ಸಾಮಾನ್ಯವಾಗಿ ಕೆಲಸ ಮಾಡಿದರೆ ಸಾಮಾನ್ಯ ಫಲಿತಾಂಶ ಬರುತ್ತದೆ; ವಿಭಿನ್ನವಾಗಿ ಯೋಚಿಸಿ, ಗುಣಮಟ್ಟದಿಂದ ಕೆಲಸ ಮಾಡಿದರೆ ಅಸಾಮಾನ್ಯ ಫಲಿತಾಂಶ ಪಡೆಯಬಹುದು” ಎಂದು ಶಿಬಿರರ‍್ಥಿಗಳಿಗೆ ಪ್ರೇರಣೆ ನೀಡಿದರು.

ರುಡ್ಸೆಟ್ ಸಂಸ್ಥೆ ನೀಡುತ್ತಿರುವ ತರಬೇತಿ ಕೇವಲ ಪ್ರಮಾಣಪತ್ರ ನೀಡುವ ಕರ‍್ಯಕ್ರಮವಲ್ಲ. ಕೈಗೆ ಕೌಶಲ್ಯ, ಮನಸ್ಸಿಗೆ ಆತ್ಮವಿಶ್ವಾಸ ಮತ್ತು ಬದುಕಿಗೆ ಸ್ವಾವಲಂಬನೆಯ ದಾರಿ ತೋರಿಸುವ ತರಬೇತಿಯಾಗಿದೆ. ಈ ಅವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಂಡು ತಮ್ಮದೇ ಆದ ಉದ್ಯಮವನ್ನು ರೂಪಿಸಿಕೊಳ್ಳಬೇಕು ಎಂದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ಸೆಟ್ ಸಂಸ್ಥೆಗಳ ಕರ‍್ಯನರ‍್ವಾಹಕ ನರ‍್ದೇಶಕರಾದ ಬಿ.ಪಿ. ವಿಜಯಕುಮಾರ್ ಮಾತನಾಡಿ, ತರಬೇತಿ ಪಡೆದವರು ತಮ್ಮ ಕೌಶಲ್ಯವನ್ನು ಸ್ವಉದ್ಯೋಗವಾಗಿ ಪರಿರ‍್ತಿಸಿಕೊಳ್ಳಬೇಕು ಎಂದು ಕರೆ ನೀಡಿದರು.

“ಸ್ವಂತ ಬಂಡವಾಳ ಇಲ್ಲವೆಂದು ಉದ್ಯಮದ ಕನಸನ್ನು ಕೈಬಿಡಬೇಡಿ. ನಿಮ್ಮಲ್ಲಿ ಕೌಶಲ್ಯ, ಪರಿಶ್ರಮ ಮತ್ತು ಉತ್ತಮ ವ್ಯವಹಾರ ಕಲ್ಪನೆ ಇದ್ದರೆ ಬ್ಯಾಂಕ್ ಸಾಲದ ನೆರವಿನಿಂದಲೂ ಉದ್ಯಮ ಆರಂಭಿಸಬಹುದು. ಬ್ಯಾಂಕ್ನಿಂದ ಸಾಲ ಪಡೆಯುವುದು ತಪ್ಪಲ್ಲ; ಪಡೆದ ಸಾಲವನ್ನು ಉತ್ಪಾದಕವಾಗಿ ಬಳಸದೆ ಇರುವುದು ತಪ್ಪು” ಎಂದು ಅವರು ಹೇಳಿದರು.
ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಪಡೆದವರು ಕ್ಯಾಮೆರಾ, ಲೈಟಿಂಗ್ ಮತ್ತು ಇತರೆ ಅಗತ್ಯ ಉಪಕರಣಗಳನ್ನು ಹೊಂದಿಸಿಕೊಂಡು ವಿವಾಹ ಸಮಾರಂಭಗಳ ಫೋಟೋಗ್ರಫಿ, ವಿಡಿಯೋಗ್ರಫಿ, ಡ್ರೋನ್ ಸೇವೆ, ಫೋಟೋ–ವಿಡಿಯೋ ಎಡಿಟಿಂಗ್, ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಮುಂತಾದ ಕ್ಷೇತ್ರಗಳಲ್ಲಿ ಉದ್ಯಮ ಆರಂಭಿಸಬಹುದು. ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ಪಡೆದವರು ಸಣ್ಣ ವ್ಯಾಪಾರಸ್ಥರು ಹಾಗೂ ಉದ್ಯಮಿಗಳಿಗೆ ಲೆಕ್ಕಪತ್ರ, ಉSಖಿ, ಟ್ಯಾಲಿ ಮತ್ತು ಡಿಜಿಟಲ್ ಅಕೌಂಟಿಂಗ್ ಸೇವೆಗಳನ್ನು ಒದಗಿಸಿ ಸ್ವಂತ ಸೇವಾ ಉದ್ಯಮ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.


“ಬ್ಯಾಂಕ್ ನಿಮಗೆ ಹಣ ಮಾತ್ರ ನೀಡುವುದಿಲ್ಲ; ನಿಮ್ಮ ಉದ್ಯಮದ ಮೇಲೆ ನಂಬಿಕೆಯನ್ನೂ ಇಡುತ್ತದೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಸಾಲ ಪಡೆದು ಉದ್ಯಮ ಆರಂಭಿಸಿ, ಪ್ರಾಮಾಣಿಕವಾಗಿ ವ್ಯವಹಾರ ನಡೆಸಿ, ಸಮಯಕ್ಕೆ ಸಾಲ ಮರುಪಾವತಿಸಿ, ಲಾಭದ ಒಂದು ಭಾಗವನ್ನು ಮತ್ತೆ ಉದ್ಯಮದಲ್ಲೇ ಹೂಡಿಕೆ ಮಾಡಿ ವ್ಯವಹಾರವನ್ನು ವಿಸ್ತರಿಸಬೇಕು” ಎಂದು ಸಲಹೆ ನೀಡಿದರು.

ಅವರು ಮತ್ತಷ್ಟು ಮಾತನಾಡಿ, “ಪ್ರಮಾಣಪತ್ರವನ್ನು ಗೋಡೆಯ ಮೇಲೆ ಹಾಕುವುದಕ್ಕಿಂತ, ಅದರಿಂದ ನಿಮ್ಮ ಜೀವನದಲ್ಲಿ ಬದಲಾವಣೆ ತರಬೇಕು. ತರಬೇತಿಯ ಕೊನೆಯ ದಿನ ನಿಮ್ಮ ಉದ್ಯೋಗ ಹುಡುಕಾಟದ ಆರಂಭವಾಗಬಾರದು; ನಿಮ್ಮ ಉದ್ಯಮದ ಮೊದಲ ದಿನವಾಗಬೇಕು” ಎಂದು ಹೇಳಿದರು.

ರುಡ್ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮರ‍್ಗರ‍್ಶನದಲ್ಲಿ ಗ್ರಾಮೀಣ ಯುವಜನರಿಗೆ ಕೌಶಲ್ಯ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿಸುವ ಕರ‍್ಯ ನಿರಂತರವಾಗಿ ನಡೆಯುತ್ತಿದ್ದು, 1000ನೇ ಫೋಟೋಗ್ರಫಿ–ವಿಡಿಯೋಗ್ರಫಿ ತರಬೇತಿ ತಂಡದ ಮೈಲಿಗಲ್ಲು ರುಡ್ಸೆಟ್ನ ನಾಲ್ಕು ದಶಕಗಳಿಗೂ ಮೀರಿದ ಸೇವಾ ಪಯಣದ ಮಹತ್ವದ ಸಾಧನೆಯಾಗಿದೆ ಎಂದು ಅವರು ಹೇಳಿದರು.

ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯು 20.07.2026ರಿಂದ 29.08.2026ರವರೆಗೆ, ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ತರಬೇತಿಯು 24.07.2026ರಿಂದ 31.08.2026ರವರೆಗೆ ನಡೆಯಿತು. ತರಬೇತಿ ಪರ‍್ಣಗೊಳಿಸಿದ ಶಿಬಿರರ‍್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ರುಡ್ಸೆಟ್ ಸಂಸ್ಥೆ, ಉಜಿರೆಯ ನರ‍್ದೇಶಕರಾದ ಸುನೀಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಪಡೆದ ಶಿಬಿರರ‍್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಧನ್ಯವಾದ ಸರ‍್ಪಿಸಿದರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕರ‍್ಯಕ್ರಮ ನಿರೂಪಿಸಿದರು.
“ತರಬೇತಿ ಪಡೆದೆವು ಎಂಬುದು ಸಾಧನೆಯಲ್ಲ; ತರಬೇತಿಯಿಂದ ಬದುಕು ಕಟ್ಟಿಕೊಂಡೆವು ಎಂಬುದೇ ನಿಜವಾದ ಸಾಧನೆ.”