ಮೂಡುಬಿದಿರೆ : ಆಟೋರಿಕ್ಷಾ ಚಾಲಕ–ಮಾಲಕರ ಸಂಘ (ರಿ.), ಮೂಡಬಿದ್ರೆ ಇದರ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇಂದು ಸಮಾಜ ಮಂದಿರದಲ್ಲಿ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಮಜೀದ್ ಕೊಡಂಗಲ್ಲು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಬಾಕ್ಯರ್‌ಕೋಡಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಗೋಪಿನಾಥ್ ಮಾರೂರು, ನಾರಾಯಣ ಪೂಜಾರಿ ಕಲ್ಲಬೆಟ್ಟು ಹಾಗೂ ಭಾಸ್ಕರ ಕುಲಾಲ್ ಕೋಟೆಬಾಗಿಲು ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ದಿನೇಶ್ ಮಾರ್ನಾಡ್ ಆಯ್ಕೆಯಾಗಿದ್ದು, ಜೊತೆ ಕಾರ್ಯದರ್ಶಿಗಳಾಗಿ ಸುದರ್ಶನ್ ಕಾಯರ್‌ಗುಂಡಿ ಹಾಗೂ ಸಂಪತ್ ಜೈನು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ದೀಪಕ್ ರಾಜ್ ಕೊಡಂಗಲ್ಲು ಹಾಗೂ ಪ್ರಶಾಂತ್ ಅಂಚನ್ ಒಂಟಿಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ರಾಮಚಂದ್ರ ಭಟ್, ಭಾಸ್ಕರ ಆಚಾರ್ಯ, ಜಯರಾಮ್ ರಾವ್, ಪ್ರದೀಪ್ ರೈ ಹಾಗೂ ಆನಂದ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜೇಶ್ ಸುವರ್ಣ ನಿರೂಪಿಸಿದರು.

