ಬೈಂದೂರಿನಲ್ಲಿ ಸೆ.3ರಂದು ಶ್ರೀರಾಮ ಕ್ಷೇತ್ರ ಪೀಠಾಧೀಶರ ಪಟ್ಟಾಭಿಷೇಕ ವಾರ್ಷಿಕೋತ್ಸವ

0
9

ಸೆಪ್ಟೆಂಬರ್ 3 ರಂದು ಬೈಂದೂರಿನಲ್ಲಿ ಶ್ರೀರಾಮ ಕ್ಷೇತ್ರದ ಪೀಠಾಧಿಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವಾರ್ಷಿಕೋತ್ಸವ
​ಬೆಳ್ತಂಗಡಿ: ದಕ್ಷಿಣದ ಅಯೋಧ್ಯೆಯೆಂಬ ಖ್ಯಾತಿ ಹೊಂದಿರುವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧ0ತಿ ಸೆ.3ರಂದು ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.

ಕ್ಷೇತ್ರದ ನಿರ್ಮಾತೃ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿವರು ತಮ್ಮ 13ನೇ ವಯಸ್ಸಿನಲ್ಲೇ ತನ್ನ ತಂದೆಯವರಿಂದಲೇ ಓಂಕಾರ ದೀಕ್ಷೆ, ಯೋಗ ದೀಕ್ಷೆ ಪಡೆದು ಸುಮಾರು 25 ವರ್ಷಗಳಿಂದ ನಿರಂತರ ಹಿಮಾಲಯ ಪವಿತ್ರ ತಪೋಭೂಮಿಗಳಾದ ಮಾನಸ ಸರೋವರ, ಕೈಲಾಸ ಯಾತ್ರೆ, ನೇಪಾಳದ ಪಶುಪತಿನಾಥ, ಚಾರ್‌ಧಾಮಗಳಾದ ಗಂಗೋತ್ರಿ, ಯಮುನೇತ್ರಿ, ಬದರಿ, ಕೇದಾರಗಳ ಪರ್ಯಟನೆ, ಅಮರನಾಥ, ವೈಷ್ಣೋದೇವಿ, ಕಾಶ್ಮೀರದ ಶಂಕರಾಚಾರ್ಯ ಜ್ಞಾನಪೀಠ ಇನ್ನೂ ಅನೇಕ ಕಡೆ ಮತ್ತು ಹರಿದ್ವಾರ, ಇಲಾಹಾಬಾದ್, ಉಜ್ಜಯಿನಿ, ನಾಸಿಕ್ ನಲ್ಲಾಗುವ ಎಲ್ಲಾ ಕುಂಭಮೇಳಗಳಲ್ಲಿ ಭಾಗವಹಿಸಿ ಮಹಾನ್ ತಪಸ್ವಿ, ಪುಣ್ಯ ಪುರುಷರ ಸಂಪರ್ಕದಲ್ಲಿರುವವರು. ಭಾರತಾದ್ಯಂತ 9 ಕಡೆ ಶಾಖಾ ಮಠಗಳನ್ನು ಮಾಡಬೇಕೆಂಬ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಂಕಲ್ಪದಂತೆ ಶ್ರೀಗಳು ಉಡುಪಿ ಬಾರ್ಕೂರಿನ ಬಿಲ್ಲಾಡಿಯಲ್ಲಿ 15 ಎಕರೆ ಸ್ಥಳದಲ್ಲಿ ಒಂದುಸುಸಜ್ಜಿತವಾದ ಐಟಿಐ ನಿರ್ಮಾಣವಾಗಿ ಇಲ್ಲಿ ವಸತಿ ಸೌಲಭ್ಯದೊಂದಿಗೆ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.

ಭಟ್ಕಳದಲ್ಲಿ 800 ವರ್ಷದ ಹಿಂದೆ ರಾಮಾನುಜಾಚಾರ್ಯರಿಂದ ಸ್ಥಾಪನೆಯಾದ ಗುರುಮಠ ಇಂದು ಪೀಠದ ವತಿಯಿಂದ ಕೆಲಸ ನಿರ್ವಹಿಸುತ್ತಿದೆ. ಗುರು ಪರಂಪರೆಯನ್ನು ದಕ್ಷಿಣದಿಂದ ಉತ್ತರಕ್ಕೆ ವಿಸ್ತರಿಸಿ ಹಿಮಾಲಯದ ದೇವಭೂಮಿ ಹರಿದ್ವಾರದಲ್ಲಿ ಮಠ ನಿರ್ಮಾಣ ಮಾಡಿ ಲೋಕಾಪರ್ಣಗೊಳಿಸಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿಸಲ್ಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕರಿಕಲ್ ಸಮುದ್ರ ತಟದಲ್ಲಿ ಒಂದು ಧ್ಯಾನ ಮಂದಿರ ಲೋಕಾಪರ್ಣಗೊಂಡಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಒಂದು ಎಕರೆ ಜಾಗ ಖರೀದಿ ಮಾಡಿ ಅಲ್ಲಿ ಸುಮಾರು ರೂ. 20 ಕೋಟಿ ವೆಚ್ಚದ ಶಾಖಾ ಮರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹೊನ್ನಾವರ, ಕುಮಟಾದಲ್ಲಿ ಶಾಖಾ ಮಠ ನಿರ್ಮಾಣದ ಕೆಲಸಗಳು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ತಿರುಪತಿ, ಶಬರಿಮಲೆ, ಶಿವಮೊಗ್ಗ, ದೆಹಲಿಯಲ್ಲಿ ಶಾಖಾಮಠ ಪ್ರಾರಂಭಿಸುವರೆ ಸಿದ್ಧತೆಗಳು ನಡೆಯುತ್ತಿದೆ. ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವದ 2018ರಲ್ಲಿ ಶ್ರೀ ರಾಮ ಕ್ಷೇತ್ರದಲ್ಲಿ ರಾಷ್ಟ್ರೀಯ ಧರ್ಮ ಸಂಸತ್ ನೇವೇರಿಸಿ ಧರ್ಮ ಸಾಮ್ರಾಜ್ಯವಾಗಿ ಪರಿವರ್ತನೆ ಮಾಡಿದರು. ಈ ಸಂದರ್ಭದಲ್ಲಿ ದೇಶ ವಿವಿಧ ಭಾಗಗಳಿಂದ ಸಾವಿರಾರು ಸಂತರು, ಗಣ್ಯರು ಭಾಗವಹಿಸಿದ್ದರು.

ಈ ವರ್ಷ ಶ್ರೀಗಳ 7ನೇ ವರ್ಷದ ચાತುರ್ಮಾಸ್ಯ ವ್ರತಾಚರಣೆ ಗುರುಪೂರ್ಣಮಿಯ ಜುಲೈ 29ರಿಂದ ಪ್ರಾರಂಭಗೊಂಡು ಸೆ.14ವರೆಗೆ ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಷ್ಯ ವಿನಾಯಕ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಲೆ, ಭಾಗವತ ಸಪ್ತಾಹ, ಭಜನೆ ಮೊದಲಾದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
​ಪ್ರತಿದಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಸ್ವಾಮೀಜಿಯವರ ಆಶೀರ್ವಾದೆ ಪಡೆದುಕೊಳ್ಳುತ್ತಿದ್ದಾರೆ.

ಸೆ.3ರಂದು ನಡೆಯುವ ಪಟ್ಟಾಭಿಷೇಕದ 18ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ರಾಜ್ಯದ ವಿವಿಧ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು, ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸೆ. 14ರಂದು ચાತುರ್ಮಾಸ್ಯ ವ್ರತಾಚರಣೆ ಮುಕ್ತಾಯಗೊಳ್ಳಲಿದ್ದು ಆ ದಿನ ಬೆಳಗ್ಗೆ ಶ್ರೀಗಳ ಸೀಮೋಲ್ಲಂಘನ ಕಾರ್ಯಕ್ರಮ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ತಟದಲ್ಲಿರುವ ಸುಮನಾವತಿ-ನದಿಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಳ್ಳಲಿದೆ ಎಂದು ಪ್ರಕಟಣೆ