ಬಾಡಿ ಬಿಲ್ಡಿಂಗ್‌ನಲ್ಲಿ ಕರೀಮ್‌ಗೆ ಚಿನ್ನದ ಪದಕ : ಮಿಸ್ಟರ್ ಕರ್ನಾಟಕ ಪಟ್ಟ – ಅದ್ದೂರಿ ಸನ್ಮಾನ

0
7

ನಾವುಂದ : ಹೈದರಾಬಾದ್‌ನಲ್ಲಿ ನಡೆದ ICN ನ್ಯಾಚುರಲ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಹಾಗೂ ಪ್ರೊ ಕಾರ್ಡ್ ಗೆದ್ದ ಕರೀಮ್, ಬೆಂಗಳೂರಿನಲ್ಲಿ ನಡೆದ WFF ಸ್ಪರ್ಧೆಯಲ್ಲಿ “ಮಿಸ್ಟರ್ ಕರ್ನಾಟಕ ಚಾಂಪಿಯನ್” ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂದಿನ ಹಂತವಾಗಿ ಗೋವಾ ಹಾಗೂ ದುಬೈನಲ್ಲಿ ನಡೆಯಲಿರುವ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ಕಳೆದ ಆರು ವರ್ಷಗಳಿಂದ ಮಲ್ಟಿಪವರ್ ಜಿಮ್, ನಾವುಂದದಲ್ಲಿ ನಿರಂತರ ತರಬೇತಿ ಪಡೆದು ಶಿಸ್ತು, ಸಮರ್ಪಣೆ ಹಾಗೂ ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ ಕರೀಮ್ ಅವರ ಯಶಸ್ಸಿಗೆ ಶಶಿಕುಮಾರ್ ,ನಿಶಾನ್ ಸರ್ ಹಾಗೂ ಶ್ರೀನಿವಾಸ್ ಖಾರ್ವಿ ಅವರ ಮಾರ್ಗದರ್ಶನ ಪ್ರಮುಖವಾಗಿದೆ. ಬಡ ಕುಟುಂಬದಿಂದ ಬಂದ ಕರೀಮ್ ಅವರ ಈ ಸಾಧನೆ ಯುವಕರಿಗೆ ಸ್ಫೂರ್ತಿಯಾಗಿದೆ.

ಕರೀಮ್ ಅವರ ಆರು ವರ್ಷಗಳ ಪರಿಶ್ರಮ ಹಾಗೂ ಸಾಧನೆಯನ್ನು ಗೌರವಿಸಿ ಮತ್ತು ನಿಶಾಂತ್ ಸರ್ ಅವರಿಗೆ ಮಲ್ಟಿಪವರ್ ಜಿಮ್ ಮಾಲೀಕ ಶಶಿಕುಮಾರ್ ಅವರ ವತಿಯಿಂದ ಮಲ್ಟಿಪವರ್ ಜಿಮ್, ನಾವುಂದದಲ್ಲಿ ಅದ್ದೂರಿ ಸನ್ಮಾನ ನೆರವೇರಿಸಲಾಯಿತು.

ದುಬೈನಲ್ಲಿ ನಡೆಯಲಿರುವ ಮುಂದಿನ ಹಂತದ ಸ್ಪರ್ಧೆಯಲ್ಲಿ ಕರೀಮ್ ಭಾಗವಹಿಸಲು ವಿಮಾನ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸಾನಿಯಾಜ್, ನಾವುಂದ ಅವರು ಭರಿಸುವುದಾಗಿ ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಗಣ್ಯರು ಸ್ನೇಹಿತರ ಬಳಗ ಜಿಮ್ ಸ್ನೇಹಿತರು ಸಾರ್ವಜನಿಕರು ಉಪಸ್ಥಿತರಿದ್ದರು.