ಅಂಬಲಪಾಡಿ ದೇವಳದಲ್ಲಿ ಮುದ್ದು ಕೃಷ್ಣ ಸ್ಪರ್ಧೆಗೆ ಚಾಲನೆ

0
6

ಉಡುಪಿ : ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಯುವಕ ಮಂಡಲ (ರಿ.) ಅಂಬಲಪಾಡಿ ಇವರ ಸಂಯೋಜನೆಯಲ್ಲಿ ಆಯೋಜಿಸಲಾಗಿದ್ದ ಮುದ್ದು ಕೃಷ್ಣ ಸ್ಪರ್ಧೆಗೆ ದೇವಳದ ಧರ್ಮದರ್ಶಿ ಡಾ. ಎನ್. ಬಿ. ವಿಜಯ ಬಳ್ಳಾಳ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷ ಹರೀಶ್ ಆಚಾರ್ಯ, ನಚಿಕೇತ ಪ್ರಕಾಶ್ ಆಚಾರ್ಯ, ಜಗದೀಶ ಶೆಟ್ಟಿಗಾರ್, ಪ್ರಶಾಂತ್ ಕೆ.ಎಸ್., ಪ್ರವೀಣ ಉಪಾಧ್ಯಾಯ, ನವೀನ್ ಹಾಗೂ ಅಜಿತ್ ಕಪ್ಪೆಟ್ಟು ಉಪಸ್ಥಿತರಿದ್ದರು.

ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಕೃಷ್ಣನ ವೇಷಭೂಷಣ ಧರಿಸಿ ಪಾಲ್ಗೊಂಡು ಸಂಭ್ರಮಿಸಿದರು. ಕಾರ್ಯಕ್ರಮವು ಮಕ್ಕಳ ಪ್ರತಿಭೆ ಹಾಗೂ ಸಾಂಸ್ಕೃತಿಕ ಅಭಿರುಚಿಗೆ ವೇದಿಕೆಯಾಗಿದ್ದು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಹುರಿದುಂಬಿಸಿದರು.

ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ಪರ್ಧೆಯ ಯಶಸ್ವಿ ಆಯೋಜನೆಗೆ ಸಹಕರಿಸಿದರು.