ಮಂಗಳೂರು : ಕೇಂದ್ರ ಸರ್ಕಾರದ ವಿಕಸಿತ ಭಾರತ ದೃಷ್ಟಿಕೋನಕ್ಕೆ ಅನುಸಾರವಾಗಿ ಪ್ರಮುಖ ಆರೋಗ್ಯ ಮತ್ತು ಯೋಗಕ್ಷೇಮ ಕಂಪನಿಯಾದ ಆಮ್ವೇ ಇಂಡಿಯಾ ಇಂದು ನ್ಯೂಟ್ರಿಲೈಟ್ ಆಯುರ್ವೇದ ಆರಂಭವನ್ನು ಘೋಷಿಸಿದೆ.
ಮೊದಲ ಹಂತದಲ್ಲಿ ಆರೋಗ್ಯಕರ ಯಕೃತ್ತಿಗಾಗಿ ರೂಪಿಸಲಾದ ಕಲಾಮೇಘ, ಹೆಚ್ಚುವರಿ ಕೊಬ್ಬಿನ ಶೇಖರಣೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಶಿಗ್ರು (ಮೊರಿಂಗಾ), ಮತ್ತು ಚಯಾಪಚಯ ಸುಧಾರಿಸುವ ವೃಕ್ಷಾಮ್ಲ ಪರಿಚಯಿಸಲಾಗುತ್ತಿದೆ ಎಂದು ಬಿಡುಗಡೆ ಸಮಾರಂಭದಲ್ಲಿ ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಚೋಪ್ರಾ ವಿವರಿಸಿದರು.
ಹೊಸ ಉತ್ಪನ್ನ ಶ್ರೇಣಿಯಲ್ಲಿ ಒಟ್ಟು ಒಂಬತ್ತು ಆಯುರ್ವೇದ ಆವಿಷ್ಕಾರಗಳನ್ನು ಅನಾವರಣಗೊಳಿಸಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ನ್ಯೂಟ್ರಿಲೈಟ್ ಆಯುರ್ವೇದವನ್ನು ರೂ. 100 ಕೋಟಿಯ ವರ್ಗವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಹೊಸ ಉತ್ಪನ್ನಗಳು ಪ್ಟೆಂಬರ್ 8ರಿಂದ ಆಮ್ವೇ ಅಧಿಕೃತ ಮಾರಾಟ ಜಾಲಗಳು, ಆಮ್ವೇ ವ್ಯಾಪಾರ ಮಾಲೀಕರು/ ವಿತರಕರು, ಆಮ್ವೇ ಮಳಿಗೆಗಳು ಹಾಗೂ www.amway.in ವೆಬ್ಸೈಟ್ ಮೂಲಕ ಲಭ್ಯವಿರುತ್ತವೆ.
ಸಾವಯವವಾಗಿ ಬೆಳೆಸಿದ, ನ್ಯೂಟ್ರಿಸರ್ಟ್-ಪ್ರಮಾಣೀಕೃತ ಹೊಲಗಳಲ್ಲಿ ಬೆಳೆದ ಆಯುರ್ವೇದ ಸಸ್ಯಗಳನ್ನು ಬಳಸಿಕೊಂಡು ತಮಿಳುನಾಡಿನಲ್ಲಿರುವ ಆಮ್ವೇಯ ಅತ್ಯಾಧುನಿಕ ಸೌಲಭ್ಯದಲ್ಲಿ ತಯಾರಿಸಲಾಗುತ್ತದೆ. ಉತ್ಪನ್ನಗಳು ಮಾಲಿನ್ಯಕಾರಕಗಳು, ಭಾರ ಲೋಹಗಳು, ಸೂಕ್ಷ್ಮ ಜೀವವಿಜ್ಞಾನ ಸುರಕ್ಷತೆ ಮತ್ತು ಪ್ರಮುಖ ಮಾರ್ಕರ್ ಸಂಯುಕ್ತಗಳ ಸ್ಥಿರತೆಗಾಗಿ ಸಮಗ್ರ, ಬಹು-ಹಂತದ ಪರೀಕ್ಷೆಗೆ ಒಳಗಾಗುತ್ತವೆ, ಗ್ರಾಹಕರು ನ್ಯೂಟ್ರಿಲೈಟ್ನಿಂದ ನಿರೀಕ್ಷಿಸುವ ಗುಣಮಟ್ಟ, ದೃಢೀಕರಣ ಮತ್ತು ಸ್ಥಿರತೆಯನ್ನು ತಲುಪಿಸಲು ಮೂಲಭೂತ ನಿಯಂತ್ರಕ ಅವಶ್ಯಕತೆಗಳನ್ನು ಮೀರಿದ ಗುಣಮಟ್ಟ ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.

