ಕುಂಜೂರು ಶ್ರೀ ದುರ್ಗಾದೇವಿ ಸನ್ನಿಧಾನದಲ್ಲಿ ಸೆ.5ರಂದು ಸಾಮೂಹಿಕ ಶನಿಪೂಜೆ

0
13

ಕುಂಜೂರು : ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ಕುಂಜೂರು ಶ್ರೀ ದುರ್ಗಾದೇವಿ ದೇವಸ್ಥಾನದ ಸನ್ನಿಧಾನದಲ್ಲಿ ಸೆ.5ರಂದು ಸಾಮೂಹಿಕ ಶನಿಪೂಜೆ ನಡೆಯಲಿದೆ.

ಶ್ರೀ ದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಸಾಮೂಹಿಕ ಶನಿಪೂಜೆಯು ಭಕ್ತಿಭಾವದಿಂದ ನೆರವೇರಲಿದ್ದು, ಶನಿದೇವರ ಅನುಗ್ರಹವನ್ನು ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.

ಶನಿಪೂಜೆಯನ್ನು ಸಲ್ಲಿಸಲು ಇಚ್ಛಿಸುವ ಭಕ್ತರು ಪೂಜೆಯೊಂದಕ್ಕೆ ರೂ.200ರಂತೆ ಮುಂಚಿತವಾಗಿ ಪಾವತಿಸಿ ರಶೀದಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಪೂಜೆಯಲ್ಲಿ ಭಾಗವಹಿಸುವ ಭಕ್ತರಿಗೆ ಪ್ರಸಾದವಾಗಿ ಹಣ್ಣುಕಾಯಿ ನೀಡಲಾಗುವುದು.

ಇದಲ್ಲದೆ, ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತೀ ಶನಿವಾರ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಭಕ್ತಾದಿಗಳಿಗೆ ಆದರದ ಸ್ವಾಗತ ಕೋರಿರುವ ಶ್ರೀ ದುರ್ಗಾ ಸೇವಾ ಸಮಿತಿಯ ವ್ಯವಸ್ಥಾಪನಾ ಸಮಿತಿ, ಅರ್ಚಕರು, ಪವಿತ್ರಪಾಣಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶನಿಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದ್ದಾರೆ.