ಮೂಡುಬಿದಿರೆ : ಕಿಶೋರ್ ಅವರು 28 ವರ್ಷಗಳ ಸರ್ಕಾರಿ ಸೇವೆ ಪೂರ್ಣಗೊಳಿಸಿ ಆ.31ರಂದು ನಿವೃತ್ತಿ ಹೊಂದಿದರು. ಬನ್ನಡ್ಕ ಪಾಡ್ಯಾರ್ ಪ್ರೌಢಶಾಲೆಯಲ್ಲಿ 12 ವರ್ಷ ಹಾಗೂ ಮುಚೂರು ಸರ್ಕಾರಿ ಶಾಲೆಯಲ್ಲಿ 16 ವರ್ಷ ಸೇವೆ ಸಲ್ಲಿಸಿರುವ ಕಿಶೋರ್, ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ಪಾಡ್ಯಾರ್ ಶಾಲೆಯ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ತಂಡಗಳು ಸತತ 7 ವರ್ಷ ತಾಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿವೆ. ಮುಚೂರು ಶಾಲೆಯ ತಂಡವು ಸತತ 14 ವರ್ಷ ತಾಲೂಕು ಮಟ್ಟದಲ್ಲಿ ಹಾಗೂ 12 ವರ್ಷ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.

