
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಾರ್ಕಳ ಶ್ರೀ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದಲ್ಲಿ ಸಹಸ್ರ ನಾಮ ತುಳಸಿ ದಳ ಅರ್ಚನೆ, ಅಷ್ಟೋತ್ತರ ಪೂಜೆ ಹಾಗೂಭಕ್ತಿ ಸಂಗೀತ ಕಾರ್ಯಕ್ರಮ ಶ್ರೀ ವೆಂಕಟೇಶ್ ಜಿ.ಚಿಪ್ಲುಂಕರ ಶಿಷ್ಯ ವೃಂದದವರಿಂದ ಸಂಗೀತ ಕಾರ್ಯಕ್ರಮ ವಿಶೇಷ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರದೀಪ್ ಭಟ್ ನಕ್ರೆ ರವರಿಂದ ರಂಗೋಲಿ ಸೇವೆ, ಭಕ್ತರಿಂದ ಭಜನಾ ಸೇವೆ, ರಾತ್ರಿ ಮಹಾಪೂಜೆ ದೀಪಾಲಂಕಾರ ಪೂಜೆ ಪುಷ್ಪಾಲಂಕಾರ ಪೂಜೆ ಮಹಾಪೂಜೆ ಮಂಗಳಾರತಿ ವಿಜೃಂಭಣೆಯಿಂದ ನಡೆಯಿತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಪ್ರಸಾದ ಸ್ವೀಕರಿಸಿದರು.

