ಹಿಂದೂ ಯುವಸೇನೆ ಸೇವಾ ಸಂಘ ಸುಲ್ಕೇರಿಮೊಗ್ರು, ಇದರ ಲೋಗೋ ಬಿಡುಗಡೆ ಹಾಗೂ ಸೇವಾ ರಸೀದಿ ಬಿಡುಗಡೆ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಅಶ್ವಥ್ ಸಾಲ್ಯಾನ್ ವರ್ಪಾಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಶೆಟ್ಟಿ ನೊಚ್ಚ ಇವರು ಭಾಗವಹಿಸಿ ಹಿಂದೂ ಯುವಸೇನೆ ಸೇವಾ ಸಂಘದ ಲೋಗೋ ಬಿಡುಗಡೆ ಮಾಡಿದರು .

ಹಾಗೂ ಸಮಾಜ ಸೇವೆಯ ಬಗ್ಗೆ ಮಾತನಾಡಿದರು. ಸಂಘವು ಸುಮಾರು 8 ವರ್ಷಗಳ (2018) ಹಿಂದೆ ಪ್ರಾರಂಭಗೊಂಡು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದು, ಆಸಕ್ತ ಕುಟುಂಬಗಳಿಗೆ ದಾನ ಸಹಾಯವನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಕಾರ್ಯಕ್ರಮ, ಅಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಅಧ್ಯಕ್ಷರು ತಿಳಿಸಿದರು. ಇಂದಿನ ಕಾರ್ಯಕ್ರಮವು ನಂದನ್ ಕುಮಾರ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಸುದರ್ಶನ್ ಇವರು ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಪುರುಷೋತ್ತಮ್ ಇವರು ನಿರ್ವಹಿಸಿದರು.
ಸಂಜೀವ ದೇವರಗುಡ್ಡೆ ಇವರು ಧನ್ಯವಾದವನ್ನಿತ್ತರು. ಸಂಘದ ಲೋಗೋವನ್ನು ಕಿರಣ್ ಕುಮಾರ್ ಜ್ಯೋತಿಕಾ ಸ್ಟುಡಿಯೋ ಅಳದಂಗಡಿ ಇವರು ಮಾಡಿದರು.

