ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಅಲ್ ಕಸೀಮ್ ಝೋನ್ : LEGACY NIGHT -2026 ಫ್ಯಾಮಿಲಿ ಮೀಟ್

0
12

ಬುರೈದ : ದಿನಾಂಕ 03-09-2026 ನೇ ಗುರುವಾರ KCF ಅಲ್ ಕಸೀಮ್ ಝೋನ್ ವತಿಯಿಂದ LEGACY NIGHT -2026 ಫ್ಯಾಮಿಲಿ ಮೀಟ್ ಕಾರ್ಯಕ್ರಮ ಬುರೈದ ರೆಸಾರ್ಟ್ ನಲ್ಲಿ ನಡೆಯಿತು.

ಮಕ್ಕಳ ಕಲಾ ಪ್ರತಿಭೆ ಅನಾವರಣ , ದಫ್ , ಕವಾಲಿ , ಸೌಹಾರ್ದ ಸಂಗಮ , ಇಸ್ಲಾಮಿಕ್ ಪ್ರಭಾಷಣ , ಅನ್ನದಾನ , ಗೇಮ್ಸ್ ಹೀಗೆ ಹತ್ತು ಹಲವಾರು ಕಾರ್ಯಕ್ರಮವು ನಡೆಯಿತು.

ಸುಮಾರು 80 ರಷ್ಟು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಕ್ವಿಜ್ , ಕಿರಾಅತ್ , ಪ್ರವಾದಿ ಮದಹ್ ಗೀತೆ, ಭಾಷಣ , ಕಲರಿಂಗ್ , ಕಾಲಿಗ್ರಫಿ ಮುಂತಾದ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬುರೈದ ಭಾಗದಲ್ಲಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು , ಸಾಮಾಜಿಕ , ಸಾಮುದಾಯಿಕ , ಶೈಕ್ಷಣಿಕ ನಾಯಕರನ್ನೊಳಗೊಂಡ ಸೌಹಾರ್ದ ಸಂಗಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕ , ಹಲವಾರು ಸಂಘಟನೆ , ಸಾಮುದಾಯಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ
KCF Al Qassim INSPIRE AWARD-2026 ನೀಡಿ ಗೌರವಿಸಲಾಯಿತು.

ರಿಯಾದ್ KCF ತಂಡದಿಂದ ದಫ್ಫ್ ಮತ್ತು ಕವಾಲಿ ಪ್ರದರ್ಶನವು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ಇಸ್ಲಾಮಿಕ್ ಪ್ರಭಾಷಣ ವೇದಿಕೆಯಲ್ಲಿ ಕೇರಳ – ಕರ್ನಾಟಕದಲ್ಲಿ ಸುಪ್ರಸಿದ್ಧರಾಗಿರುವ ಇಸ್ಲಾಮಿಕ್ ಸ್ಕೂಲರ್ ಸುಮಾರು 3000 ದಷ್ಟು ವಿದ್ಯಾರ್ಥಿಗಳು ಕಲಿಯುತ್ತಿರುವ ಮಲಪ್ಪುರಂ ನಿಲಂಬೂರು ಮಜಮಹ್ ಸಖಾಫತಿ ಎಂಬ ಸಂಸ್ಥೆಯ ಸಾರಥಿ ಶೈಖುನಾ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಅವರಿಂದ ಅರ್ಥ ಗರ್ಭಿತವಾದ ಪ್ರಭಾಷಣವು ನಡೆಯಿತು.

ಮಹಿಳೆಯರಿಗೆ cook without fire ಸ್ಪರ್ಧೆ, ಡಿಜಿಟಲ್ ಕ್ವಿಜ್ ನಡೆಯಿತು. ಪುರುಷರಿಗೆ ಡಿಜಿಟಲ್ ಕ್ವಿಜ್ , ವಾಲಿ ಬಾಲ್ ಪಂದ್ಯಾಟ , ಹಗ್ಗ ಜಗ್ಗಾಟ ಪಂದ್ಯವು ನಡೆಯಿತು. ವಾಲಿಬಾಲ್ ಪಂದ್ಯಾಟದಲ್ಲಿ ಹರಬಿ ಸ್ಪೋರ್ಟ್ಸ್ ಬುರೈದ ಪ್ರಥಮ ಹಾಗೂ ಕುಕ್ಕುವಳ್ಳಿ ಫ್ರೆಂಡ್ಸ್ ಬುರೈದ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹಗ್ಗ ಜಗ್ಗಾಟದಲ್ಲಿ KCF ಸುಲ್ತಾನ ಯೂನಿಟ್ ಪ್ರಥಮ ಹಾಗೂ ಬರಕಾ ಸ್ವೀಟ್ಸ್ ಬುರೈದ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆದ ಆಕರ್ಷಣೀಯ ಡಿಜಿಟಲ್ ಕ್ವಿಜ್ ಪಂದ್ಯಾಟದಲ್ಲಿ ಚಿನ್ನದ ನಾಣ್ಯ ಬಹುಮಾನವಾಗಿ ನೀಡಲಾಯಿತು.