“ಕಾಸರಗೋಡು ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ”

0
8

ಕಾಸರಗೋಡು : ಸೆಪ್ಟೆಂಬರ್ 4 ರಂದು ಬಾಲಗೋಕುಲ ನಗರ ಸಮಿತಿ ವತಿಯಿಂದ 46ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ರಾಜಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಕೆ.ಎನ್ ಅವರು ದೀಪ ಪ್ರಜ್ವಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಮೊದಲು ಅಮೈ ಶ್ರೀ ಕೃಷ್ಣ ಭಜನಾ ಮಂದರದಿಂದ ಆಕರ್ಷಕ ಶೋಭಯಾತ್ರೆ ಹೊರಟು ಪ್ರಸ್ ಕ್ಲಬ್ ಜಂಕ್ಷನ್, ಹಳೆ ಬಸ್ ಸ್ಟಾಂಡ್, ಎಂ.ಜಿ ರಸ್ತೆಯಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತಲುಪಿತು. ಶ್ರೀ ಕೃಷ್ಣ ರಾಧೆ ವೇಷಧಾರಿ ಮಕ್ಕಳು, ಚೆಂಡೆ ಮೇಳ, ನರೇಂದ್ರ ಬಾಲಗೋಕುಲ, ವೆಂಕಟ್ರಮಣ ಬಾಲಗೋಕುಲ, ವೀರ ಹನುಮಾನ್ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ, ಕೋಲಾಟ, ವೈವಿಧ್ಯಮಯ ನೃತ್ಯ ಪ್ರದರ್ಶನ, ಶೋಭಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ನೇತಾರರು, ಜನ್ಮಾಷ್ಟಮಿ ಸಮಿತಿ ಪದಾಧಿಕಾರಿಗಳು ಬಾಲಗೋಕುಲಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು ಮಹನೀಯರು ಮಕ್ಕಳು ಭಾಗವಹಿಸಿದರು.

ಬಳಿಕ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ರಾದ ವೇಣುಗೋಪಾಲ ಕೆ.ಎನ್ ಅಧ್ಯಕ್ಷತೆ ವಹಿಸಿದರು. ಛದ್ಮವೇಷ ಸ್ಪರ್ಧೆಯ ಮಕ್ಕಳಿಗೆ ಮಹನೀಯರಿಗೆ, ಮಾತೆಯರಿಗೆ ನಡೆಸಿದ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಮುಖ್ಯ ಅತಿಥಿಗಳಾದ ಅಡ್ವಕೇಟ್ ಶಶಿಧರ ಆನೆಮಜಲು ಅವರು ಬಹುಮಾನ ವಿತರಿಸಿದರು. ಅತಿಥಿಯಾಗಿ ಬಾಲಗೋಕುಲ ಕಾಸರಗೋಡು ತಾಲೂಕು ರಕ್ಷಾಧಿಕಾರಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು

ವೀರ ಹನುಮಾನ್ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯಿಂದ ಆರಂಭಗೊಂಡು, ಜನ್ಮಾಷ್ಟಮಿಯ ಹಿರಿಯ ಕಾರ್ಯಕರ್ತರಾದ ವರಪಪ್ರಸಾದ್ ಕೋಟೆಕಣಿ ಸ್ವಾಗತಿಸಿ ಸಮಿತಿ ಉಪಾಧ್ಯಕ್ಷೆ ಶ್ರೀವಳ್ಳಿ ಕಾರ್ಯಕ್ರಮ ನಿರೂಪಣೆ ಹಾಗೂ ವಂದೇ ಮಾತರಂ ಹಾಡಿದರು ಕಾರ್ಯದರ್ಶಿ ಕೆ.ರಾಜೇಂದ್ರ ಕುಂಟಾರ್ ಧನ್ಯವಾದ ನೀಡಿದರು ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.