ರಾವಣನು ಕೂಡಾ ವೈದ್ಯಕೀಯ ಸಾಹಿತ್ಯ ಬರೆದಿದ್ದ – ಬೆಂಗಳೂರಿನಲ್ಲಿ ಆರೋಗ್ಯ ಸಾಹಿತ್ಯ ರತ್ನ ಪ್ರಶಸ್ತಿ ಸ್ವೀಕರಿಸಿ ಡಾ ಸುರೇಶ ನೆಗಳಗುಳಿ

0
7

ಬೆಂಗಳೂರು : ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಮತ್ತು ಬೆಂಗಳೂರು ಹೆಲ್ತ್ ಫೌಂಡೇಶನ್ ಆಯೋಜಿಸಿದ್ದ ರಾಜ್ಯ ಮಟ್ಟದ ವೈದ್ಯಲೋಕ ಆರೋಗ್ಯ ಕಥೆ-ಕವನ ಸ್ಪರ್ಧೆ – 2026 ರಲ್ಲಿ ಕಣಚೂರು ಆಯುರ್ವೇದ ಕಾಲೇಜು, ಮಂಗಳೂರು (ದಕ್ಷಿಣ ಕನ್ನಡ) ನ ವೈದ್ಯರಾದ ಹಾಗೂ ಸಾಹಿತಿ ಡಾ. ಸುರೇಶ ನೆಗಳಗುಳಿ ಅವರು ಕವನ ಸ್ಪರ್ಧೆ – ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಅವರಿಗೆ ಬಹುಮಾನ ಹಾಗೂ ಅರೋಗ್ಯ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಯಿತು.

ಮುಳಿಯ ಗೋಲ್ಡ್ & ಡೈಮಂಡ್, ಮಣಿಪಾಲ್ ಸೆಂಟರ್, ಡಿಕನ್ಸನ್ ರಸ್ತೆ, ಬೆಂಗಳೂರಿನಲ್ಲಿ ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 500 ಕ್ಕೂ ಹೆಚ್ಚು ಸ್ಪರ್ಧಿಗಳ ನಡುವೆ ಅವರ ಕವನ ಆಯ್ಕೆಯಾಗಿದ್ದು, ಇದೇ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ವಿಶೇಷ ಉಪನ್ಯಾಸವನ್ನು ಸಹ ನೀಡಿದರು.ಅವರು ಮಾತನಾಡುತ್ತಾ ವೈದ್ಯಕೀಯ ಸಾಹಿತ್ಯವು ಕೇವಲ ಮನರಂಜನೆಗಾಗಿ ಅಲ್ಲ ಬದಲಾಗಿ ಆರೋಗ್ಯದ ಕೀಲಿ ಕೈ ಆಗಿದೆ. ವೈದ್ಯನೇ ಬರೆವ ಸಾಹಿತ್ಯ, ವೈದ್ಯಕೀಯ ವಿಚಾರದ ಯಾವುದೇ ವ್ಯಕ್ತಿಯ ಸಾಹಿತ್ಯ ಎರಡೂ ವೈದ್ಯ ಸಾಹಿತ್ಯವೇ ಆಗಿದೆ ಎನ್ನುತ್ತಾ ರಾವಣನು ಸಹಿತ ನಾಡೀ ಪರೀಕ್ಷೆ ಮರ್ಮ ವಿಜ್ಞಾನದಂತಹ ಅತ್ಯಮೂಲ್ಯ ವೈದ್ಯ ಕೀಯ ಸಾಹಿತ್ಯ ಬರೆದಿರುವುದು ಈ ಸಾಹಿತ್ಯದ ಪುರಾಣ ಇತಿಹಾಸವನ್ನು ತಿಳಿಸುತ್ತದೆ ಎಂದರು.ಡಾ ವಸುಂಧರಾ ಭೂಪತಿ ಅಧ್ಯಕ್ಷತೆಯಲ್ಲಿ ಮುಳಿಯ ಜುವೆಲ್ಲರ್ ಸಹಾಭಾಗೀತ್ವದಲ್ಲಿ ವೈದ್ಯ ಲೋಕ ಪತ್ರಿಕೆ ಹಾಗೂ ವೈದ್ಯ ಸಾಹಿತ್ಯ ಪರಿಷತ್ ರೂವಾರಿ ಶ್ರೀ ಕೃಷ್ಣ ಮಾಯಿಲಂಕೋಡಿ ಹಾಗೂ ಆಕಾಶವಾಣಿ ನಿವೃತ್ತ ಎನ್ ವಿ ರಮೇಶ ನವ ಕರ್ನಾಟಕ ದ ಪ್ರೇಮಚಂದ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಸಾಹಿತ್ಯ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಡಾ ಸುರೇಶ ನೆಗಳಗುಳಿ ಸುಹಾಸ ಬಜಾಲ್ ಪಕ್ಕಲಡ್ಕ ಮಂಗಳೂರು 575009