ಬ್ರಹ್ಮಾ ಕುಮಾರೀಸ್ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆ ಇಲ್ಲಿ ಶಿಕ್ಷಕರ ದಿನಾಚರಣೆ

0
11

ಬ್ರಹ್ಮಾ ಕುಮಾರೀಸ್ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆ ಇಲ್ಲಿ ಶಿಕ್ಷಕರ ದಿನಾಚರಣೆ ಯನ್ನು ಆಚರಿಸಲಾಯಿತು. ಸ್ಥಳೀಯ ಶಾಲೆಗಳಲ್ಲಿ ಶಿಕ್ಷರಾಗಿರುವಂಥಹ ಹಾಗು ಇತೀಚೆಗೆ ನಿವೃತ್ತ ರಾದ ಸುಮಾರು 30 ರಷ್ಟು ಶಿಕ್ಷಕ ರನ್ನು ಗೌರವ ಪೂರ್ವಕ ವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಶತೆ ವಹಿಸಿದ್ದ ಮಂಗಳೂರು ಬ್ರಹ್ಮಾಕುಮಾರಿ ಕೇಂದ್ರದ ಸಂಚಾಲಿಕಿ ಹಾಗು ಹಿರಿಯ ರಾಜಯೋಗ ಶಿಕ್ಷಕಿ ಬ್ರಹ್ಮಾಕುಮಾರಿ ವಿಶ್ವೇಶ್ವರಿ ಈ ಸಂದರ್ಭದಲ್ಲಿ ಮಾತಾಡಿ ಭವಿಷ್ಯದ ಉಜ್ವಲ ತಾರೆಗಳಿಗೆ ದಾರಿ ತೋರಿಸುವ ದೀಪಗಳಾದ ಶಿಕ್ಷಕರ ಪಾತ್ರವನ್ನು ಶ್ಲಾಘಿಸಿದರು. ಇಂತಹ ಉನ್ನತ ಜವಾಬ್ದಾರಿಯ ವೃತ್ತಿಗೆ ಪೂರಕವಾಗಿ ಬ್ರಹ್ಮಾಕುಮಾರಿ ಧ್ಯಾನ ಕೇಂದ್ರದಲ್ಲಿ ತಿಳಿಸಿ ಕೊಡುವಂತಹ ರಾಜಯೋಗ ಧ್ಯಾನದ ಮಹತ್ವವನ್ನು ತಿಳಿಸಿ ಕೊಟ್ಟರು ಹಾಗು ಎಲ್ಲ ಶಿಕ್ಷಕರಿಗೂ ಈ ಧ್ಯಾನದ ಕಡೆಗೆ ಒಲವು ತೋರಿಸಲು ಕರೆ ನೀಡಿದರು.

ನಿಟ್ಟೆ ಬ್ರಾಂದವನ ಧ್ಯಾನ ಸಂಚಾಲಕಿ ಬಿ ಕೆ ಯಶೋದರವರು ಬ್ರಹ್ಮಾಕುಮಾರಿ ಸಂಸ್ಥೆಯ ಪರಿಚಯದೊಂದಿಗೆ ಭೌತಿಕ ಹಾಗು ಆಧ್ಯಾತ್ಮಿಕ ಶಿಕ್ಷಣದ ಸಾಮರಸ್ಯವನ್ನು ತಿಳಿಸಿಕೊಟ್ಟರು.

ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖಸ್ಥೆ ಪ್ರಾಧ್ಯಾಪಕಿ ಡಾ. ವೀಣಾ ದೇವಿ ಯವರು ಮುಖ್ಯ ಅಥಿತಿ ಯಾಗಿ ಭಾವಿಸಿದ್ದರು ಹಾಗು ನಿವೃತ್ತ ಶಿಕ್ಷಕರಾದ ಸಂಜೀವ ಶೆಟ್ಟಿ, ಇನ್ನ, ಶಶಿಕಲಾ ಶೆಟ್ಟಿ ನಿಟ್ಟೆ ಹಾಗು ಜಯಂತಿ ಶೆಟ್ಟಿ ಬೆಲ್ಮನ್ ಇವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ಫರು.
ಶಿಕ್ಷಕಿ ಮೀನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು ಹಾಗು ಬಿ ಕೆ ಮನೋಹರ್ ಶೆಟ್ಟಿ ವಂದನಾರ್ಪಣೆ ಗೈದರು.