ಕೋರ್ದಬ್ಬು ದೈವಸ್ಥಾನದಲ್ಲಿ ಕಳ್ಳತನ ಪ್ರಕರಣ : ಆರೋಪಿಗಳ ಬಂಧನ

0
65

ಮುಲ್ಕಿ : ಪೊಲೀಸ್‌ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಕೋರ್ದಬ್ಬು ‌ ದೈವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ ಮಂಗಳೂರು ನಗರ ಮುಲ್ಕಿ ಪೊಲೀಸರು.

ದಿನಾಂಕ 01-09-2026 ರಂದು ಮದ್ಯ ರಾತ್ರಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಕೋರ್ದಬ್ಬು ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡಿದ ಆರೋಪಿಗಳಾದ 1). ಜಾಯಿದ್ದೀನಿ ಸಿನಾನ್ ಪ್ರಾಯ 26. ತಂದೆ: ಮಹಮ್ಮದ್ ವಾಸ: #525(A) ಹೆಚ್ ಕೆ ಮಂಜಿಲ್ ಎಸ್ ಎಸ್ ರೋಡ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಕಂಚಿನಡ್ಕ ಪಡುಬಿದ್ರೆ ಉಡುಪಿ ಜಿಲ್ಲೆ ಜಿಲ್ಲೆ, 2). ಯಾಸಿನ್ ಪ್ರಾಯ: 36 ವರ್ಷ, ತಂದೆ: ದಿ. ಯಾಕುಬ್ , ವಾಸ: ಪಡ್ಡೆ ಅಂಗಡಿ ಮನೆ ನಿಟ್ಟೆ ಪೋಸ್ಟ್ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ 3). ಮಹಮ್ಮದ್ ಅಪ್ರಿದ ಪ್ರಾಯ: 26 ವರ್ಷ ತಂದೆ: ಅಕ್ಬರ್ ಅಲಿ, ವಾಸ: #700 1 ನೇ ಮುಖ್ಯ ರಸ್ತೆ 2 ನೇ ತಿರುವು ಗೋಕುಲು ನಗರ ಚಲವಾದಿ ಕೆರಿ, ದಾವಣಗೆರೆ ನಗರ ದಾವಣಗೆರೆ ಜಿಲ್ಲೆ 4) ಸೇಕ್ ಅಬ್ದುಲ್ ಜುಮ್ಮನ್ ಪ್ರಾಯ: 26 ವರ್ಷ ತಂದೆ: ಶೇಕ್ ಅಬ್ದುಸ ವಾಸ: #1071 1 ನೇ ಮುಖ್ಯ ರಸ್ತೆ 4 ನೇ ತಿರುವು ಜಾಲಿ ನಗರ ದಾವಣಗೆರೆ ನಗರ ದಾವಣಗೆರೆ ಜಿಲ್ಲೆ ಎಂಬುವರನ್ನು ದಸ್ತಗಿರಿ ಮಾಡಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.