
ಪೆರ್ನಾಜೆ : ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ, ವಿಟ್ಲ ಮತ್ತು ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳಿಂದ ‘ಸಂಗೀತೋತ್ಸವ 2026’ ಕಾರ್ಯಕ್ರಮವು, ಸೆ.06ರಂದು ಶ್ರೀ ಭಗವತಿ ದೇವಸ್ಥಾನ ವಿಟ್ಲ ಇಲ್ಲಿ ಸಿಂಹಾಸನದ ವಿಶೇಷ ಪೂಜಾ ಮಂಟಪದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಪಶುವೈದ್ಯರು ಈಶ್ವರ ಭಟ್ ಕಾಶಿಮಠ ಇವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ವರ ಸಿಂಚನ ಪುರಸ್ಕಾರ 2026ರ ಡಾ| ಈಶ್ವರ ಭಟ್ ದಂಪತಿಗಳಿಗೆ ಸ್ವರ ಸಿಂಚನ ಪುರಸ್ಕಾರ ನೀಡಿ ಗೌರವಿಸಲಾಯಿತು.ವ್ಯವಸ್ಥಾಪಕರು ಶ್ರೀ ಭಗವತಿ ದೇವಸ್ಥಾನ ವಿಟ್ಲ ಶ್ರೀ ಕೇಶವ ಆರ್. ವಿ, ವಯಲಿನ್ ವಾದಕರಾದ ಶ್ರೀ ಪ್ರಭಾಕರ ಕುಂಜಾರು , ಮೃದಂಗ ವಾದಕರು ಡಾ|| ಬಿ. ಆರ್. ನಾರಾಯಣ ಪ್ರಕಾಶ್, ರವಿಶಂಕರ್ ಸಿ ಮೂಡಂಬೈಲು, ಗೋಪಾಲಕೃಷ್ಣ ನಾಯಕ್, ಪಡಿಬಾಗಿಲು, ಸಂಗೀತ ಶಿಕ್ಷಕಿ ಸವಿತಾ ಕೋಡಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ|| ಈಶ್ವರ ಭಟ್ ಅವರು ಪುರಸ್ಕಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೇಶವ ಆರ್. ವಿ. ಸಂದರ್ಭಚಿತವಾಗಿ ಹಿತ ನುಡಿದರು. ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಕೋಡಂದೂರು ಇವರು ಪ್ರಾರ್ಥಿಸಿದರು. ನಿರೂಪಣೆ ಅಮೂಲ್ಯ ಅರವಿಂದ ಪ್ರಸಾದ್ ನಡೆಸಿಕೊಟ್ಟರು.ಸಭಾ ಕಾರ್ಯಕ್ರಮದ ನಂತರ ಸ್ವರ ಸಿಂಚನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ವಯಲಿನ್ ವಾದಕರಾದ ಪ್ರಭಾಕರ ಕುಂಜಾರು ಹಾಗೂ ಪ್ರಿಯಾ ಕೆ. ಪರಕ್ಕಜೆ, ಮೃದಂಗದಲ್ಲಿ ಬಿ. ನಾರಾಯಣ ಪ್ರಕಾಶ್ ಇವರ ಸಹಕಾರದೊಂದಿಗೆ ನಡೆಯಿತು.
