ವಗ್ಗ: ವಲಯ ಗಾಣಿಗರ ಸಂಘ ರಚನೆ

0
3

ಬಂಟ್ವಾಳ : ತಾಲ್ಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳನ್ನು ಒಟ್ಟುಗೂಡಿಸಿ ವಲಯ ಸಂಘ ರಚಿಸುವ ಮೂಲಕ ಸಂಘದ ಬಲವರ್ಧನೆಗೊಳಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಹೇಳಿದ್ದಾರೆ.

ಇಲ್ಲಿನ ವಗ್ಗ ಪಚ್ಚಾಜೆ ಸಭಾಂಗಣದಲ್ಲಿ ಭಾನುವಾರ ನಡೆದ ವಲಯ ಗಾಣಿಗರ ಸಂಘ ರಚನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘದ ಕಾರ್ಯದಶರ್ಿ ಬಾಲಕೃಷ್ಣ ಸೆರ್ಕಳ ಪ್ರಾಸ್ತಾವಿಕ ಮಾತನಾಡಿ, ಪ್ರಸಕ್ತ ಸಂಘವು ಕೈಗೊಂಡ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಳದ ಆಡಳಿತ ಧರ್ಮದಶರ್ಿ ಕೆ.ಎಸ್.ಪಂಡಿತ್, ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಕೆಮ್ಮನಾಜೆ, ಸುಮಂಗಲಾ ಕ್ರೆಡಿಟ್ ಸೊಸೈಟಿ ನಿದರ್ೇಶಕ ಪದ್ಮನಾಭ ಇಡ್ಕಿದು ಶುಭ ಹಾರೈಸಿದರು.

ಇದೇ ವೇಳೆ ಸುರೇಶ್ ಬಂಗೇರ ಮಾಂಗಾಜೆ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ತಂಡ ರಚನೆಗೊಳಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ ವಾದಕ ಕೆ.ಬಾಬು ಸಪಲ್ಯ ವಗ್ಗ, ಪ್ರಗತಿಪರ ಕೃಷಿಕ ರಾಮಣ್ಣ ಬಡಗುಂಡಿ, ಮಹಿಳಾ ಪ್ರತಿನಿಧಿ ಉಷಾ ಗಂಗಾಧರ ಮತ್ತು ಅನಿತಾ ಅನಿಲ್ ದೋಟ ಮತ್ತಿತರರು ಇದ್ದರು.

ವಿದ್ಯಾರ್ಥಿನಿ ಧನ್ಯಾ ಸ್ವಾಗತಿಸಿ, ಅಭಿಷೇಕ್ ಪಿಲಿಂಗಾಲು ವಂದಿಸಿದರು. ದಿನೇಶ್ ವಗ್ಗ ಮತ್ತು ಚೇತನ್ ಪಿಲಿಂಗಾಲು ಕಾರ್ಯಕ್ರಮ ನಿರೂಪಿಸಿದರು.