ಭಂಡಾರಿಬೆಟ್ಟು: 75ನೇ ವರ್ಷದ ಮೊಸರುಕುಡಿಕೆ ಸಂಭ್ರಮ : ‘ನೂತನ ಮಂದಿರ ನಿರ್ಮಾಣಕ್ಕೆ ಸಿದ್ಧತೆ’

0
4

ಬಂಟ್ವಾಳ : ಇಲ್ಲಿನ ಭಂಡಾರಿಬೆಟ್ಟು ಪ್ರದೇಶದಲ್ಲಿ ಕಳೆದ 74 ವರ್ಷಗಳ ಹಿಂದೆ ಸ್ಥಳೀಯ ಹಿರಿಯ ಭಕ್ತರು ಸೇರಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆರಂಭಿಸಿದ್ದ ಮೊಸರುಕುಡಿಕೆ ಉತ್ಸವ ಪ್ರಸಕ್ತ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಈಗಾಗಲೇ ಖರೀದಿಸಿದ 10 ಸೆಂಟ್ಸ್ ಜಮೀನಿನಲ್ಲಿ ಎಲ್ಲಾ ಹಿರಿಯ ಮತ್ತು ಕಿರಿಯ ಭಕ್ತರ ಸಹಕಾರದಲ್ಲಿ ನೂತನ ಶ್ರೀಕೃಷ್ಣ ಭಜನಾ ಮಂದಿರ ನಿಮರ್ಾಣ ಕಾಮಗಾರಿ ತ್ವರಿತವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಿದೆ ಎಂದು ಸ್ವಣರ್ೋದ್ಯಮಿ ಸುನಿಲ್ ಅಪೂರ್ವ ಭಂಡಾರಿಬೆಟ್ಟು ಹೇಳಿದ್ದಾರೆ.

ಇಲ್ಲಿನ ಭಂಡಾರಿಬೆಟ್ಟು ಶ್ರೀಕೃಷ್ಣ ಮಂದಿರ ಸೇವಾ ಟ್ರಸ್ಟ್ ಸಹಿತ ಮೊಸರುಕುಡಿಕೆ ಸಮಿತಿ ಮತ್ತು ಮಾತೃ ಬಳಗದ ವತಿಯಿಂದ ಶನಿವಾರ ಸಂಜೆ ನಡೆದ 75ನೇ ವರ್ಷದ ಮೊಸರುಕುಡಿಕೆ ಉತ್ಸವದ ಧಾಮರ್ಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ ಮಾತನಾಡಿ, ‘ಅವಿಭಜಿತ ಜಿಲ್ಲೆಯಲ್ಲಿ ಹಿಂದೂ ಸಮಾಜದ ಎಲ್ಲಾ ಹಬ್ಬ ಹರಿದಿನಗಳ ಆಚರಣೆಯಲ್ಲಿ ಸರ್ವ ಧಮರ್ೀಯರು ಪಾಲ್ಗೊಳ್ಳುವ ತೌಳವ ಸಂಸ್ಕೃತಿ ಇದೆ’ ಎಂದರು.

ಇದೇ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯೂಸಿಯಲ್ಲಿ ಗರಿಷ್ಟ ಅಂಕ ಗಳಿಸಿದ ಸ್ಥಳೀಯ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ ಬಂಟ್ವಾಳ, ಉದ್ಯಮಿ ರಾಧಾಕೃಷ್ಣ ಮೈಸೂರು, ಉಪನ್ಯಾಸಕ ಶ್ಯಾಮ್ ಪ್ರಸಾದ್ ಎಸ್. ವಳಚ್ಚಿಲ್ ಶುಭ ಜಾರೈಸಿದರು. ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಗೌಡ, ಮಾತೃ ಬಳಗ ಅಧ್ಯಕ್ಷೆ ತುಳಸಿ ಆರ್. ಮತ್ತಿತರರು ಇದ್ದರು.

ಟ್ರಸ್ಟ್ ಅಧ್ಯಕ್ಷ ನಾರಾಯಣ ಮೂಲ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಘುನಾಥ ಸಾಲ್ಯಾನ್ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.