ಕಂಬಳ ಸಮಿತಿಗಳ ಸಮಾಲೋಚನಾ ಸಭೆ

0
6

ಮೂಡುಬಿದಿರೆ : ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಜಂಟಿ ಆಶ್ರಯದಲ್ಲಿ ಸಮಾಲೋಚನಾ ಸಭೆ ಮೂಡುಬಿದಿರೆ ಸೃಷ್ಟಿ ಗಾರ್ಡನ್ ನಲ್ಲಿ ಸೆಪ್ಟೆಂಬರ್ 8ರಂದು ನಡೆಯಿತು. ಕೋಣಗಳನ್ನು ಓಡಿಸುವ ಸಮಯದ ಕುರಿತು, ಜನ ವ್ಯವಸ್ಥೆಯ ಬಗ್ಗೆ, ಓಡಿಸುವ ವ್ಯಕ್ತಿಗಳಿಗೆ ನೀಡುವ ಗೌರವಗಳ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು. ಉತ್ತಮ ರೀತಿಯಲ್ಲಿ ಫಲಿತಾಂಶ ನೀಡುವುದಕ್ಕಾಗಿ ವ್ಯವಸ್ಥಾಪಕಗಳು ರೆಫ್ರಿಗಳ ಬಳಿ ಯಾರನ್ನು ತೆರಳದಂತೆ ನಿರ್ವಹಿಸಬೇಕು.

ಸಮಯ ಪಾಲಿಸದೆ ಇರುವವರನ್ನು ಅನರ್ಹಗೊಳಿಸುವ ಬಗ್ಗೆ ದಡ ನಿರ್ಧಾರವನ್ನು ಸಮಿತಿ ತೆಗೆದುಕೊಳ್ಳಬೇಕು. ಸಮಿತಿಯ ಯಾವುದೇ ನಿರ್ಧಾರವನ್ನೂ, ಯಾರೇ ಬಂದರೂ ಬದಲಾಯಿಸದಂತೆ ನಿಗದಿಗೊಳಿಸಬೇಕು ಎಂದು ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ಸಭೆಯಲ್ಲಿ ನಿವೇದಿಸಿಕೊಂಡರು. ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಉತ್ತಮ ಅನುದಾನವನ್ನು ನೀಡಲಾಗುವುದೆಂದು ಮುಖ್ಯಮಂತ್ರಿಗಳು ಈಗಾಗಲೇ ಭರವಸೆ ನೀಡಿರುತ್ತಾರೆ ಎಂದು ಸಭೆಯಲ್ಲಿ ಅಧ್ಯಕ್ಷರು ಪ್ರಕಟಿಸಿದರು.

ಮುಲ್ಕಿ ಕಂಬಳದ ಬಗ್ಗೆ ಇರುವ ಭಿನ್ನಾಭಿಪ್ರಾಯವನ್ನು ಭಾಸ್ಕರ್ ಕೋಟ್ಯಾನ್ ರ ವಿಶೇಷ ಸಮಿತಿ ಪರಿಹರಿಸುವಂತೆ ಕೇಳಿಕೊಳ್ಳಲಾಯಿತು.
ಸಮಿತಿಯ ನಿರ್ಣಯ ಹಾಗೂ ನಿಯಮಗಳನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ಮಾತ್ರ ಸರಕಾರದ ನಿಯಮದಂತೆ ನಿಗದಿತ ಸಮಯದ ಒಳಗೆ ಮುಗಿಸಲು ಸಾಧ್ಯವಿದೆ ಎಂದು ಎಲ್ಲರೂ ಒಪ್ಪಿಕೊಂಡರು.

ವೇದಿಕೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಯ ವಿವಿಧ ಪದಾಧಿಕಾರಿಗಳಾದ ಬಾರ್ಕೂರು ಶಾಂತರಾಮ ಶೆಟ್ಟಿ, ಕೂಳೂರು ಪಿ ಆರ್ ಶೆಟ್ಟಿ, ಚಂದ್ರಹಾಸ ಸನಿಲ್, ಭಾಸ್ಕರ ಕೋಟ್ಯಾನ್, ಮುಚ್ಚೂರು ಲೋಕೇಶ್ ಶೆಟ್ಟಿ, ಪೊಡಂಬು ಸಂದೀಪ್ ಪೆಟ್ಟಿ ಹಾಗೂ ವಿಜಯ್ ಕುಮಾರ್ ಕಂಗಿನಮನೆ ಹಾಜರಿದ್ದರು.