
ಮೂಡುಬಿದಿರೆ : ತಾಲೂಕು ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ವಾರ್ಡ್ ಸಭೆ ಸಪ್ಟೆಂಬರ್ 8ರಂದು ಮಾರುಕಟ್ಟೆ ಸಂಜೀವಿನಿ ಕಟ್ಟಡದಲ್ಲಿ ಜರುಗಿತು. ನೋಡಲ್, ಆಡಳಿತಾಧಿಕಾರಿ ಗುರುರಾಜ್ ಪಿ ಎಂ ಅಧ್ಯಕ್ಷತೆ ವಹಿಸಿ ಗ್ರಾಮಸ್ಥರಿಂದ ಬಂದ ಎಲ್ಲ ರೀತಿಯ ಅಹವಾಲುಗಳನ್ನು ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಲುಪಿಸಿ ಕಾರ್ಯರೂಪಕ್ಕೆ ಬರುವಂತೆ ಒತ್ತಡ ಹೇರಲಾಗುವುದು ಎಂದು ಭರವಸೆ ಇತ್ತರು.
ವೇದಿಕೆಯಲ್ಲಿ ಟಿಪಿ ಇ ರಿತೇಶ್ ಕುಮಾರ್, ಅರಣ್ಯ ಇಲಾಖೆಯ ಬಸಪ್ಪ ಹಲಗೇರ, ಗ್ರಾಮ ಲೆಕ್ಕಾಧಿಕಾರಿ ಕಿಶೋರ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕ್ಕೆ ವೀಣಾ ಎಸ್ ಹೆಗ್ಡೆ, ಆರೋಗ್ಯ ಇಲಾಖೆಯ ಮುತ್ತು ಹಾಜರಿದ್ದು ವಿವಿಧ ಮಾಹಿತಿಗಳನ್ನು ಗ್ರಾಮಸ್ಥರಿಗೆ ನೀಡಿದರು.

ದರೆಗುಡ್ಡೆ ಪಿ ಡಿ ಓ ರಾಜು ಸ್ವಾಗತಿಸಿ ಪಂಚಾಯತ್ನ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ನೀಡಿ ಸಲಹೆ ಸೂಚನೆಗಳನ್ನು ದಾಖಲಿಸಿದರು. ಕಾರ್ಯದರ್ಶಿ ಸುನಂದ ಜಮಾ ಖರ್ಚು ವಿವರ, ವಾರ್ಡ್ ನಡವಳಿ ವಿವರ ನೀಡಿದರು. ಸಹಕಾರ್ಯದರ್ಶಿ ನಯನ ವಿವಿಧ ಇಲಾಖೆ ಅವರು ಕಾಮಗಾರಿಯ ಮಾಹಿತಿ ವಿವರ ಒಪ್ಪಿಸಿದರು. ಮಾನಸ ಕಾರ್ಯಕ್ರಮ ಸಂಘಟಿಸಿದ್ದರು.
