ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು: ವಿಜಯ ಕೊಡವೂರು

0
14

ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹಾಗೂ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ— ವಿಜಯ ಕೊಡವೂರು

ಉಡುಪಿ : ಸರ್ಕಾರಿ ಪ್ರೌಢಶಾಲೆ, ತೆಂಕನಿಡಿಯೂರಿನಲ್ಲಿ ಹ್ಯಾಂಡ್‌ಬಾಲ್ ಪಂದ್ಯಾವಳಿಯು ಉಡುಪಿ ಜಿಲ್ಲಾ ಮಟ್ಟದ ಬಾಲಕಿಯರ ಹ್ಯಾಂಡ್‌ಬಾಲ್ ಪಂದ್ಯಾವಳಿ ಸರ್ಕಾರಿ ಪ್ರೌಢಶಾಲೆ, ತೆಂಕನಿಡಿಯೂರು ಇಲ್ಲಿ ನಡೆಯಿತು.

ಪಂದ್ಯಾವಳಿಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದರು. ಈ ಸಂದರ್ಭದಲ್ಲಿ ಪಂದ್ಯಾವಳಿಯ ಉದ್ಘಾಟನೆ ಕೆ ವಿಜಯ ಕೊಡವೂರು ನೆರವೇರಿಸಿ, ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲಾಯಿತು. ಶಿಕ್ಷಕರು ಹಾಗೂ ಸಂಘಟಕರು ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡಿದರು.