ಕೇರಳ ಗಡಿನಾಡ ಕಲಾಕುಂಚ ಶಾಖೆಯ ಯಶಸ್ವಿಯಾದ ವೀಣಾವಾದನ ಸಂಗೀತ ಸಂಭ್ರಮ

0
22

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳದ ಗಡಿನಾಡ ಕಲಾಕುಂಚ ಶಾಖೆಯ ಆಶ್ರಯದಲ್ಲಿ ಯಶಸ್ವಿಯಾದ ವೀಣಾವಾದನ, ಸಂಗೀತ ಸಂಭ್ರಮ ಅದ್ಭುತವಾಗಿ ವಿಜೃಂಭಣೆಯಿಂದ ನಡೆಯಿತು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.

ಕೇರಳದ ಕಾಸರಗೋಡು ಜಿಲ್ಲೆಯ ಐಲದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚಿಗೆ ಪುತ್ತೂರಿನ ಕುಮಾರಿ ಸುಪ್ರಜಾರಾವ್ ರವರು ವೀಣಾವಾದನದೊಂದಿಗೆ ನೆರೆದ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಮೀಯಪದವುನ ರಾಧಾಮಣಿರಾವ್, ಮಂಗಲ್ಪಾಡಿಯ ದಿವ್ಯಾ ಚಂದನ್ ಕಾರಂತ್, ಪುತ್ತೂರಿನ ಸುಮನ್‌ರಾವ್, ಮಂಗಳೂರಿನ ಚೇತನಾ ದಯಾನಂದ ಹೆಬ್ಬಾರ್, ಪುತ್ತೂರಿನ ಕುಮಾರಿ ಸುಪ್ರಜಾರಾವ್ ಇವರಿಂದ ಶಾಸ್ರ್ರೀಯ ಸಂಗೀತ ಸೇವೆ ಯಶಸ್ವಿಯಾಯಿತು ಎಂದು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ಜಯಲಕ್ಷ್ಮಿ ಶ್ರೀರಾಮ ಕಾರಂತ್ ಪ್ರಕಟಿಸಿದರು.

ಪುತ್ತೂರಿನ ಪ್ರಶಾಂತ್‌ರಾವ್ ಮತ್ತು ಮಂಲ್ಪಾಡಿಯ ಚಂದನ್ ಕಾರಂತ್ ದೀಪ ಪ್ರಜ್ವಲನೆಗೈದರು. ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ಉಪಸ್ಥಿತರಿದ್ದರು. ದೇವಸ್ಥಾನದ ವತಿಯಿಂದ ಚಂದನ್ ಕಾರಂತ್ ಧನ್ಯವಾದ ಸಮರ್ಪಿಸಿದರು.