ವಿತ್ತೀಯ ಸೇರ್ಪಡೆ ಉತ್ತೇಜನಕ್ಕೆ ಕ್ರಮ

0
10

ಮಂಗಳೂರು: ದೇಶದಲ್ಲಿ ವಿತ್ತೀಯ ಸೇರ್ಪಡೆ ಉತ್ತೇಜಿಸುವ ದೃಷ್ಟಿಯಿಂದ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ ಗ್ಲೋಬಲ್ ಫಿನ್‍ಟೆಕ್ ಫೆಸ್ಟ್‍ನಲ್ಲಿ ಹಲವು ನವೀನ ಉಪಕ್ರಮಗಳನ್ನು ಅನಾವರಣಗೊಳಿಸಿದರು.

ತಕ್ಷಣವೇ ರೂಪೇ ಕಾರ್ಡ್ ಮತ್ತು ವ್ಯಾಪಾರಿಗಳಿಗಾಗಿ ಯುಪಿಐ ಕ್ಯೂಆರ್ ಕೋಡ್‍ಗಳನ್ನು ವಿತರಿಸಲು ಓಪನ್-ಸೋರ್ಸ್ ಎಟಿಎಂ, ಆಯ್ದ ಸರ್ಕಾರದ ಬೆಂಬಲಿತ ಸಾಲ ಯೋಜನೆಗಳಿಗಾಗಿ ‘ಯುಪಿಐ ಮೇಲಿನ ಕ್ರೆಡಿಟ್ ಲೈನ್’ ಸೌಲಭ್ಯ, ಹಾಗೂ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ, ತ್ರಿಪಕ್ಷೀಯ ನಗದು ಠೇವಣಿ ಸೇವೆ ಇದರಲ್ಲಿ ಸೇರಿದೆ.

ಓಪನ್-ಸೋರ್ಸ್ ಎಟಿಎಂ ವ್ಯವಸ್ಥೆಯಡಿ ಗ್ರಾಹಕರು ಸರಳವಾದ ಸ್ವಯಂ-ಸೇವಾ ಪ್ರಕ್ರಿಯೆಯ ಮೂಲಕ ಎಟಿಎಂನಿಂದಲೇ ವೈಯಕ್ತೀಕರಿಸಿದ ರೂಪೇ ಡೆಬಿಟ್, ಕ್ರೆಡಿಟ್ ಮತ್ತು ಎನ್‍ಸಿಎಂಸಿ ಕಾರ್ಡ್‍ಗಳನ್ನು ತಕ್ಷಣವೇ ಪಡೆಯಲು ಸಾಧ್ಯವಾಗುತ್ತದೆ. ಯುಪಿಐ ಆಧರಿತ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳಿಗೆ ಕ್ಯೂಆರ್ ಕೋಡ್ ವಿತರಿಸಲಾಗುತ್ತದೆ. ಜತೆಗೆ ಎಟಿಎಂಗಳ ಮೂಲಕ ಚೆಕ್ ಠೇವಣಿ, ಖಾತೆ ತೆರೆಯುವಿಕೆ ಮತ್ತು ಸಾಲದ ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನೂ ಒದಗಿಸಲಾಗುತ್ತಿದೆ ಎಂದು ಪ್ರಕಟಣೆ ಹೇಳಿದೆ.

ಅಂತೆಯೇ ಎಇಪಿಎಸ್ ತ್ರಿಪಕ್ಷೀಯ ನಗದು ಠೇವಣಿ ಒಂದು ಅಂತರ್‍ಕಾರ್ಯನಿರ್ವಹಣಾ ಸಹಾಯಕ ಬ್ಯಾಂಕಿಂಗ್ ಸೇವೆಯಾಗಿದ್ದು, ಆಧಾರ್ ಬಯೋಮೆಟ್ರಿಕ್ ದೃಢೀಕರಣ ಆಧಾರಿತ ಇಕೆವೈಸಿ ಮೂಲಕ ನೋಂದಾಯಿಸಲಾದ ಠೇವಣಿದಾರರು, ಭಾಗವಹಿಸುವ ಎಇಪಿಎಸ್ ಟಚ್‍ಪಾಯಿಂಟ್ ಆಪರೇಟರ್‍ಗಳ ಮೂಲಕ ತಮ್ಮ ಕುಟುಂಬ ಸದಸ್ಯರು ಅಥವಾ ಆತ್ಮೀಯರ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಠೇವಣಿ ಮಾಡಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದೆ.