ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿನಿಗೆ ಧರ್ಮಸ್ಥಳ ಯೋಜನೆಯ ಆರ್ಥಿಕ ನೆರವು

0
13

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ( ರಿ ) ವಿಟ್ಲ ತಾಲೂಕಿನ ಸಾಲೆತ್ತೂರು ವಲಯದ ಸಾಲೆತ್ತೂರು ಗ್ರಾಮದ ಕ್ಷೇತ್ರದಿಂದ ಪ್ರತಿ ತಿಂಗಳು ಮಾಶಾಸನಾ ಪಡೆಯುವ ಕೃಷ್ಣಪ್ಪ ರವರ ಮಗಳ ಶಿಕ್ಷಣಕ್ಕೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಿದ್ಯಾನಿಧಿ ಮಂಜೂರಾದ ಮೊತ್ತವನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ದೇವಿಪ್ರಸಾದ್ ರವರು ಹಸ್ತಾಂತರಿಸಿದರು.

ಈ ಸಂಧರ್ಭ ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ಸುರೇಶ್ ಸರ್, ವಲಯಧ್ಯಕ್ಷರಾದ ದಿನೇಶ್, ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಗಣೇಶ್, ಜ್ಞಾನವಿಕಾಸ ಸಮನ್ವಯಧಿಕಾರಿ, ಸೇವಾಪ್ರತಿನಿಧಿ ವೀಣಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.