ಶಂಕರಪುರ : ಜೆಸಿಐ ಶಂಕರಪುರ ಜಾಸ್ಮಿನ್ ಶಿಲ್ಪ ಸೃಷ್ಟಿ ಜೆಸಿ ಸಪ್ತಾಹದ 5ನೇ ದಿನದ ಅಂಗವಾಗಿ ‘ಯಕ್ಷ ಹಾಸ್ಯ ವೈಭವ’ ಕಾರ್ಯಕ್ರಮವನ್ನು ಇಂದು ಸಂಜೆ 7 ಗಂಟೆಗೆ ಶಂಕರಪುರದಲ್ಲಿ ಆಯೋಜಿಸಲಾಗಿದೆ.
‘ಕುಶಾಲ್ ಗುರಿಕಾರೆ’ ಖ್ಯಾತಿಯ ದಿನೇಶ್ ಕೊಡಪದವು ಅವರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ ‘ಯಕ್ಷ ಹಾಸ್ಯ ವೈಭವ’ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನದ ಹಾಸ್ಯ ಹಾಗೂ ಮನರಂಜನೆಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜೆಸಿ ಸಪ್ತಾಹದ ಅಂಗವಾಗಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಇಂದು ಸಂಜೆ 7 ಗಂಟೆಗೆ ಸರಿಯಾಗಿ ಶಂಕರಪುರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತವಿದ್ದು, ತಾವೂ ಬನ್ನಿ, ತಮ್ಮವರನ್ನೂ ಕರೆದುಕೊಂಡು ಬನ್ನಿ ಎಂದು ಜೆಸಿಐ ಶಂಕರಪುರ ಜಾಸ್ಮಿನ್ ತಂಡ ತಿಳಿಸಿದೆ.

